ಉಪ್ಪಿನಂಗಡಿ:ದುಷ್ಕರ್ಮಿಗಳ ತಂಡವೊಂದು ಐದು ಮಂದಿ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಲಂತಿಲ ಗ್ರಾಮದ ಅಂಡೆತಡ್ಕದಲ್ಲಿ ನಡೆದಿದೆ.
ಮೂವರು ಯುವಕರಿಗೆ ಸಣ್ಣಪುಟ್ಟ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫಯಾಝ್ (26), ಹಫೀಝ್ (19) ಎಂಬುವವರು ರಾತ್ರಿ ಅಂಗಡಿಯೊಂದರ ಬಳಿ ಇದ್ದರು. ಇದೇ ವೇಳೆ ಅಲ್ಲಿಗೆ ಬಂದ 4ರಿಂದ 5 ಮಂದಿಯ ತಂಡ ಅವರ ಮೇಲೆ ಏಕಾಏಕಿ ತಲ್ವಾರು ದಾಳಿ ನಡೆಸಿದೆ.
ಬಳಿಕ 30 ರಿಂದ 40 ಮಂದಿ ಬೈಕ್ ಗಳಲ್ಲಿ ಬಂದಿದ್ದು ಅಂಡೆತಡ್ಕದ ಅಂಗಡಿಯಲ್ಲಿ ಕುಳಿತುಕೊಂಡಿದ್ದ ಸಿದ್ದೀಕ್, ಅಯ್ಯೂಬ್, ಝಕರಿಯಾ ಎಂಬುವವರ ಮೇಲೆ ತಲವಾರು ದಾಳಿ ನಡೆಸಿ ಎಸ್ಕೇಪ್ ಆಗಿದೆ. ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Laxmi News 24×7