Breaking News

ವಾಹನ ಸವಾರರಿಗೆ ಇನ್ಮುಂದೆ ಇಂಧನದ ಅಗತ್ಯವಿಲ್ಲ

Spread the love

ನವದೆಹಲಿ : ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಅವರು ದೇಶದಲ್ಲಿ ಬಸ್(Bus)ಗಳು, ಟ್ರಕ್(Truck)ಗಳು ಮತ್ತು ಕಾರು(car)ಗಳನ್ನು ಓಡಿಸಲು ಹಸಿರು ಹೈಡ್ರೋಜನ್(Green hydrogen) ಅನ್ನು ಬಳಸಲು ಯೋಜಿಸುತ್ತಿದ್ದಾರೆ.

ನಗರಗಳಲ್ಲಿ ಒಳಚರಂಡಿ ನೀರು (Sewage water) ಮತ್ತು ಘನ ತ್ಯಾಜ್ಯ(Solid waste)ವನ್ನು ಬಳಸಿಕೊಂಡು ಹಸಿರು ಹೈಡ್ರೋಜನ್ ಉತ್ಪಾದಿಸಲು ಯೋಜಿಸುತ್ತಿರುವುದಾಗಿ ಗಡ್ಕರಿ ತಿಳಿಸಿದ್ದಾರೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶೀಘ್ರದಲ್ಲೇ ದೆಹಲಿ ರಸ್ತೆಗಳಲ್ಲಿ ಹಸಿರು ಹೈಡ್ರೋಜನ್ ಚಾಲಿತ ಕಾರು ಓಡಾಡಲಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವ್ರು ಪ್ರಾಯೋಗಿಕ ಯೋಜನೆಯಡಿ ಕಾರನ್ನ ಖರೀದಿಸಿದ್ದು, ಫರಿದಾಬಾದ್ʼನ ತೈಲ ಸಂಶೋಧನಾ ಕೇಂದ್ರದಿಂದ ಹಸಿರು ಹೈಡ್ರೋಜನ್ ತೆಗೆದುಕೊಂಡಿದ್ದಾರೆ. ಇದು ಸಾಧ್ಯ ಎಂದು ಜನರಿಗೆ ತಿಳಿಸಲು ಶೀಘ್ರದಲ್ಲೇ ಕಾರು ಓಡಿಸುವುದಾಗಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಗಡ್ಕರಿ ಯೋಜನೆ ಏನು ಗೊತ್ತಾ?
‘ಮುಂದಿನ ಎರಡು ಮೂರು ದಿನಗಳಲ್ಲಿ ನಾನು ಕಾರು ತಯಾರಕರಿಗೆ ಶೇ.100 ರಷ್ಟು ಜೈವಿಕ ಎಥೆನಾಲ್ ಚಾಲಿತ ಎಂಜಿನ್ʼಗಳನ್ನು ತಯಾರಿಸುವಂತೆ ಕೋರಿ ಕಡತಕ್ಕೆ ಸಹಿ ಹಾಕಲಿದ್ದೇನೆ’ ಎಂದು ಗಡ್ಕರಿ ಹೇಳಿದರು. ದೇಶವು ಪ್ರಸ್ತುತ ಪ್ರತಿ ವರ್ಷ 8 ಲಕ್ಷ ಕೋಟಿ ರೂ.ಗಳ ಪೆಟ್ರೋಲ್, ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡುತ್ತಿದೆ. ‘ದೇಶವು ತನ್ನ ಬಳಕೆಯನ್ನು ಅದೇ ರೀತಿಯಲ್ಲಿ ಮುಂದುವರಿಸಿದರೆ, ಮುಂದಿನ 5 ವರ್ಷಗಳಲ್ಲಿ ಅದರ ಆಮದು ಬಿಲ್ 25ಲಕ್ಷ ರೂ.ಗಳಿಗೆ ಹೆಚ್ಚಾಗುತ್ತದೆ’ ಎಂದು ಅವರು ಹೇಳಿದರು.

ವಾಹನಗಳು ಹಸಿರು ಹೈಡ್ರೋಜನ್ʼನಲ್ಲಿ ಚಲಿಸುತ್ವೆ..!
ಹಸಿರು ಹೈಡ್ರೋಜನ್ ಚಾಲಿತ ಸಾರ್ವಜನಿಕ ಸಾರಿಗೆಯನ್ನು ನಡೆಸಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕಾರು, ಬಸ್, ಟ್ರಕ್ ಎಲ್ಲವೂ ಹಸಿರು ಹೈಡ್ರೋಜನ್ʼನಿಂದಲೇ ಓಡಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ನದಿ ಮತ್ತು ಚರಂಡಿಗಳಲ್ಲಿ ಬೀಳುವ ಕೊಳಕು ನೀರನ್ನು ಅವುಗಳಿಂದ ಹಸಿರು ಜಲಜನಕವನ್ನ ಉತ್ಪಾದಿಸಲು ಬಳಸಬೇಕು. ಹಸಿರು ಹೈಡ್ರೋಜನ್ʼನಲ್ಲಿ ವಾಹನಗಳು ಓಡುವ ದಿನ ದೂರವಿಲ್ಲ ಎಂದು ಗಡ್ಕರಿ ಹೇಳಿದರು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ