ಬೆಳಗಾವಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಿಲಿಟರಿ ಮಹಾದೇವ ಮಂದಿರದ ಹಿಂದಿನ ಕ್ಯಾಂಪ್‍ನ ಸ್ಯಾಪಲ್ ರಸ್ತೆಯಲ್ಲಿ ಗುಲ್‍ಮೋಹರ್ ರಸ್ತೆಯಲ್ಲಿ ಇಂದು 1.20ರ ಸುಮಾರಿಗೆ ನೆಲಕ್ಕುರುಳಿದೆ. ಇದರ ಪರಿಣಾಮ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜ್ಯಾಮ್ ಉಂಟಾಗಿತ್ತು.ಇನ್ನು ಮರವು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇನ್ನು ಕಾರೊಂದು ಇದೇ ಮಾರ್ಗವಾಗಿ ಹೋಗುತ್ತಿರುವಾಗ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಇನ್ನು ಕೂಡಲೇ ಸ್ಥಳಕ್ಕೆ ಆಗಮಿಸಿದ ಟ್ರ್ಯಾಫಿಕ್ ಎಎಸ್‍ಐ ಅಶೋಕ್ ಹಾಗೂ ಕಂಟೋನ್‍ಮೆಂಟ್ ಮಾಜಿ ಉಪಾಧ್ಯಕ್ಷರಾದ ಸಾಜೀದ್ ಶೇಖ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರವನ್ನು ರಸ್ತೆಯೊಂದ ಸರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು.ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಕಂಟೋನ್‍ಮೆಂಟ್ ಮಾಜಿ ಉಪಾಧ್ಯಕ್ಷರಾದ ಸಾಜೀದ್ ಶೇಖ್ ಘಟನೆಯನ್ನು ಕುರಿತು ಮಾಹಿತಿ ನೀಡಿದರು.
