ಮೈಸೂರು: ಆಸ್ತಿ ಕಬಳಿಕೆಗಾಗಿ ಮೃತ ವೃದ್ದೆಯ ಹೆಬ್ಬೆಟ್ಟು ಗುರುತು ಪಡೆದ ಪ್ರಕರಣ ಸಂಬಂಧಿಸಿ ಹೆಬ್ಬೆಟ್ಟು ಸಹಿ ಪಡೆದದವರ ಮೇಲೆ ವಿದ್ಯಾರಣ್ಯಪುರಂನಲ್ಲಿ ಠಾಣೆಯಲ್ಲಿ FIR ದಾಖಲಾಗಿದೆ.
ಶ್ರೀರಾಂಪುರ ನಿವಾಸಿ ಜಯಮ್ಮ ನವೆಂಬರ್ 16 ರಂದು ಮೃತಪಟ್ಟಿದ್ದರು. ಅಂತಿಮ ದರ್ಶನ ಪಡೆಯಲು ಸಂಬಂಧಿಕರಾದ ಕಾವ್ಯ ತೆರಳಿದ್ದಾಗ ಮೃತ ಜಯಮ್ಮರ ಅಕ್ಕನ ಮಗ ಸುರೇಶ ಎಂಬುವರು 6-7 ಬೆಲೆಯುಳ್ಳ ಭದ್ರತಾ ಪತ್ರಗಳಿಗೆ ಶವದ ಹೆಬ್ಬೆಟ್ಟಿನ ಗುರುತು ಒತ್ತಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿನಗೆ ಏಕೆ ಸುಮ್ಮನೀರು ಎಂದು ಆವಾಜ್ ಹಾಕಿ ಬಾಯಿ ಮುಚ್ಚಿಸಿದ್ದರು.
ಹೆಬ್ಬೆಟ್ಟು ಪಡೆಯುತ್ತಿರುವ ದೃಶ್ಯಗಳನ್ನ ಚಿತ್ರೀಕರಿಸಿದ ಅವರು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಶವದ ಹೆಬ್ಬೆಟ್ಟು ಒತ್ತಿಸಿಕೊಂಡವರ ಮೇಲೆ ಎಫ್ಐಆರ್ ಹಾಕಿದ್ದಾರೆ.
Laxmi News 24×7