ಬೆಂಗಳೂರಿನಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ 66ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ರಚಿಸಿರುವ 66 ಕನ್ನಡ ಪುಸ್ತಕಗಳನ್ನು ಸಿಎಂ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿಗಳು ಎಲ್ಲ ವಿಷಯಗಳ ಪುಸ್ತಕ ಒಂದು ಕಡೆ ಸಿಗಬೇಕು ಎಂದರೆ ಸಪ್ನಾ ಬುಕ್ ಹೌಸ್‍ಗೆ ಹೋಗಬೇಕು. ನಾನು ಹಲವಾರು ಬಾರಿ ಇಲ್ಲಿಗೆ ಭೇಟಿ ಕೊಟ್ಟಿದ್ದೇನೆ. ಹಲವಾರು ಗಂಟೆ ಅಲ್ಲಿ ಕಳೆದಿದ್ದೇನೆ.
ಒಳಗಡೆ ಹೋದರೆ ಅಲ್ಲಿನ ಜಗತ್ತೇ ಬೇರೆ, ಹೊರಗಿನ ಜಗತ್ತನ್ನು ನಾವು ಅಲ್ಲಿ ಮರೆಯುತ್ತೇವೆ. ವಿಶೇಷವಾಗಿ ಇವರಿಗೆ ಕನ್ನಡದ ಬಗ್ಗೆ ಇರುವ ಆಸಕ್ತಿ ನಮಗೆಲ್ಲರಿಗೂ ಆಶ್ಚರ್ಯ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರವಾಗಿ ಕನ್ನಡವನ್ನು ಬೆಳೆಸುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ವಲಯದಲ್ಲಿ ಅತೀ ಶ್ರೇಷ್ಠವಾದ ಕನ್ನಡ ಬೆಳವಣಿಗೆಗೆ ತನ್ನ ಕೊಡುಗೆ ಕೊಟ್ಟ ಬುಕ್ ಸ್ಟಾಲ್ ಇದ್ದರೆ ಅದು ಸಪ್ನಾ ಬುಕ್ ಹೌಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಕಮಲಾ ಹಂಪನಾ, ಎಚ್‍ಎಸ್ ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ಸಪ್ನ ಬುಕ್ ಹೌಸ್ ಮುಖಸ್ಥ ನಿತಿನ್ μÁ, ಪತ್ರಕರ್ತ ರವಿ ಹೆಗಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.