ಯಾದಗಿರಿ: ಮದ್ಯದ ಅಮಲಿನಲ್ಲಿ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ ಕಾಮಾಂದ ಬಳಿಕ ಪ್ರಶ್ನಿಸಿದರೆ ಭಿಕ್ಷುಕಿ ತನ್ನ ಪತ್ನಿಯಾಗಬೇಕು ಎಂದು ನಾಟಕವಾಡಿದ ಘಟನೆ ಯಾದಗಿರಿಯ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ಕಾಮುಕ ಹನುಮಂತ (40) ಬಂಧಿತ ಆರೋಪಿ. ಭಿಕ್ಷುಕಿಗೆ ಕಂಠಪೂರ್ತಿ ಮದ್ಯ ಕುಡಿಸಿ ಬಳಿಕ ತಾನೂ ಕುಡಿದು ಭಿಕ್ಷುಕಿ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದಾನೆ. ಇದನ್ನು ಸ್ಥಳೀಯರು ಪ್ರಶ್ನಿಸಿದಾಗ ಆಕೆ ನನ್ನ ಹೆಂಡತಿಯಾಗಬೇಕು ನಾಟಕ ಮಾಡಿದ್ದಾನೆ.
ಸ್ಥಳೀಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕಾಮುಕನನ್ನು ಬಂಧಿಸಿದ್ದಾರೆ.
Laxmi News 24×7