ಅಕ್ರಮವಾಗಿ ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ
ಅಬಕಾರಿ ಅಪರ ಆಯುಕ್ತರು (ಅಪರಾಧ)ಬೆಳಗಾವಿ, ಹಾಗೂ ಅಬಕಾರಿ ಅಧಿಕ್ಷರು,ಜಂಟಿ ಆಯುಕ್ತರ ಕಛೇರಿ ಬೆಳಗಾವಿ, ಅಬಕಾರಿ ಉಪ ಅಧಿಕ್ಷಕರು, ಬೆಳಗಾವಿ ಉಪ ವಿಭಾಗ ರವರ ಮಾಗ೯ದಶ೯ನದಲ್ಲಿ, ಬುಧವಾರ ರಾತ್ರಿ 10.30ರ ಸುಮಾರಿಗೆ ಜಂಟಿ ಕಾರ್ಯಚರಣೆ ವೇಳೆಯಲ್ಲಿ ಬೆಳಗಾವಿ ಜಂಟಿ ಆಯುಕ್ತರ ಕಛೇರಿಯ ವಿಚಕ್ಷಣ ದಳದ ನಿರೀಕ್ಷಕರು ಹಾಗು ಸಿಬ್ಬಂದಿ ವ೦ಟಮುರಿ ಕಾಲೋನಿಯ ವ೦ಟಮುರಿ ತಿರುವು ಬಳಿ ಒಂದು ಇನ್ನೊವಾ ಕಾರನಲ್ಲಿ ಅಕ್ರಮವಾಗಿ 16 ಗ್ರಾಂ ನಿಶೇಧಿತ ಹೆರಾಯಿನ (Heroine) ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಸಿಕ್ಕಿದ್ದು, ಮುದ್ದೆಮಾಲು ಹಾಗು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಅಬ್ದುಲ್ ಖಾಧಿರ ಆತೀಕ ನಾಯಕ ಅಲಿಯಾಸ (ಜಿಯಾ), ಆಕೀಬ ಸಲೀಮ ಮಕಾಂದಾರ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಅಬಕಾರಿ ನಿರೀಕ್ಷರಾದ ದುಂಡಪ್ಪಾ ಹಕ್ಕಿ ಅವರು NDPS ಕಾಯದೆ ಅಡಿ ಪ್ರಕರಣ ದಾಖಲೆಸಿಕೊಂಡಿದ್ದಾರೆ.