Breaking News

ಬ್ರಾ ಸೈಜ್​​, ಸೊಂಟದ ಸುತ್ತಳತೆ ಹಾಕಿ ಹುಡುಗಿ ಬೇಕು ಎಂದ ಭೂಪ! ಕಮೆಂಟ್​ ಬಾಕ್ಸ್​ನಲ್ಲೇ ಹಿಗ್ಗಾಮುಗ್ಗಾ ತರಾಟೆ

Spread the love

ನವದೆಹಲಿ: ಹುಡುಗಿ ನೋಡೋಕೆ ಸುಂದರವಾಗಿರಬೇಕು, ವಿದ್ಯಾವಂತೆ, ಗುಣವಂತೆ, ಬುದ್ಧಿವಂತೆ ಆಗಿದ್ರೆ ಸಾಕಪ್ಪ. ಅಂತಹ ಹುಡುಗಿ ಓಕೆ ಅಂದ್ರೆ ಕಣ್ಮುಂಚಿ ತಾಳಿ ಕಟ್ಟಿಬಿಡ್ತೀನಿ. ಕಣ್ಣಲ್ಲಿ ಕಣ್ಣಿಟ್ಟು ಅವಳನ್ನು ಕಾಪಾಡ್ತೀನಿ, ಸುಖವಾಗಿ ಸಂಸಾರ ಮಾಡಿಕೊಂಡು ಇರ್ತೀನಿ ಎಂದು ಯುವಕರು ಹೇಳೋದನ್ನು ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಭೂಪ, ತನ್ನನ್ನು ಮದುವೆ ಆಗುವ ಹುಡುಗಿಯ ಬ್ರಾ ಸೈಜ್, ಸೊಂಟದ ಸುತ್ತಳತೆ, ಪಾದದ ಉದ್ದ, ಎತ್ತರ, ಗಾತ್ರ ಇಂತಿಷ್ಟೇ ಇರಬೇಕು ಎಂದು ಪಟ್ಟಿ ಮಾಡಿ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಹಾಕಿದ್ದಾನೆ.

ಇವನ ಬೇಡಿಕೆಯ ಪಟ್ಟಿ​ ವೈರಲ್​ ಆಗಿದೆ.

‘ಬೆಟರ್​ಹಾಫ್​.ಎಐ'(Betterhalf.ai) ಎಂಬ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೊಫೈಲ್​ನ ಬಯೋಡಟಾ ವಿಭಾಗದಲ್ಲಿ ತನ್ನನ್ನು ವರಿಸುವ ಹುಡುಗಿ 47 ರಿಂದ 52 ಕೆಜಿ ತೂಕ ಇರಬೇಕು. ಅವಳ ಪಾದ 6-7 ಇಂಚು ಉದ್ದ ಇರಬೇಕು. ಎತ್ತರ 5.2 ಅಡಿಯಿಂದ 5.6 ಇರಬೇಕು. ಇನ್ನು ಅವಳ ಬ್ರಾ ಸೈಜ್ 32b ಯಿಂದ 32c​, ಸೊಂಟದ ಸುತ್ತಳತೆ 12-16 ಇಂಚು ಸಾಕು ಎಂದಿದ್ದಾನೆ. ಅಷ್ಟೇ ಈತನನ್ನು ಮದುವೆ ಆಗುವು ಹುಡುಗಿ ವಯಸ್ಸು 18ರಿಂದ 26 ವರ್ಷದೊಳಗೆ ಇರಬೇಕಂತೆ. ಜಾತಿ 2ಎ ಕೆಟಗೆರಿಗೆ ಸೇರಿರಬೇಕಂತೆ. ಹಾಸ್ಯಮಯಿ ಆಗಿರುವ ಜತೆಗೆ ತನ್ನ ಕುಟುಂಬಸ್ಥರು ಮತ್ತು ಸಮಾಜದೊಂದಿಗೆ ಬೆರೆಯುವ ಗುಣ ಆಕೆಗೆ ಇರಬೇಕಂತೆ. ಇನ್ನು ಸೌಂದರ್ಯ ಪ್ರಜ್ಞೆಯುಳ್ಳವಳಾಗಿದ್ದು, ಮೆನಿಕ್ಯೂರ್​/ಪೆಡಿಕ್ಯೂರ್​ ಮಾಡಿಸಿಕೊಳ್ಳುವ ಜತೆಗೆ ಸ್ವಚ್ಛತೆಗೆ ಸದಾ ಗಮನ ಹರಿಸುವಳಾಗಿರಬೇಕಂತೆ. ಪ್ರವಾಸಪ್ರಿಯೆ ಆಗಿರಬೇಕಂತೆ. ಇನ್ನು ಸಿನಿಮಾ ನೋಡುವ ಹವ್ಯಾಸವೂ ಇರಬೇಕಂತೆ. ಅಷ್ಟೇ ಅಲ್ಲ, ನಾಯಿಯನ್ನು ಪ್ರೀತಿಸುವ ಗುಣ ಆಕೆಗೆ ಇರಬೇಕಂತೆ, ಆದರೆ ಮಕ್ಕಳನ್ನು ಇಷ್ಟ ಪಡಬಾರದಂತೆ! ಇಷ್ಟೆಲ್ಲಾ ಅರ್ಹತೆ ಜತೆಗೆ ಪ್ರಾಮಾಣಿಕತೆ-ನಿಷ್ಟೆಯೂ ಆಕೆಯಲ್ಲಿ ಇರಬೇಕಂತೆ.

ವಧು ಮ್ಯಾಟ್ರಿಮೋನಿಯಲ್​ ವೆಬ್​ಟೈಟ್​ನಲ್ಲಿ ಇವನು ಹಾಕಿದ್ದ ಬೇಡಿಕೆಯ ಪಟ್ಟಿ ನೋಡಿ ಹಲವರು ಕಮೆಂಟ್​ ಬಾಕ್ಸ್​ನಲ್ಲೇ ಕಿಡಿಕಾರಿದ್ದಾರೆ. ‘ಇವನಿಗೆ ಸಂಗಾತಿ ಬೇಕಿಲ್ಲ, ದೈಹಿಕ ಸುಖ ಮಾತ್ರವೇ ಬೇಕಿದೆ’.’ದಾಂಪತ್ಯ ಅಂದ್ರೆ ಕಾಮ ಅಂದುಕೊಂಡಿದ್ದಾನೆ, ಇವನಿಗೊಂದು ಬಾರ್ಬಿ ಡಾಲ್​ ಸೆಟ್​ ಕೊಟ್ಟು ಬಿಡಿ’. ‘ಇವನೇನು ಲೇಡಿಸ್​ ಟೈಲರಾ? ಬ್ರಾ ಗಾತ್ರ, ಸೊಂಟದ ಸುತ್ತಳತೆ ಹೀಗೆ ಇರಬೇಕು ಅಂತಿದ್ದಾನೆ’. ‘ಸಂಸಾರ ಮಾಡೋಕೆ ಹುಡ್ಗಿಯನ್ನ ಈತ ಮದ್ವೆ ಆಗಲ್ಲ, ಸೆಕ್ಸ್​ಗಾಗಿ.. ‘ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇವನ ಬೇಡಿಕೆ ಪಟ್ಟಿಯನ್ನು ಸ್ಕೀನ್​ ಶಾಟ್​ ತೆಗೆದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೇವಡಿ ಮಾಡಿದ್ದಾರೆ. ಇದು ಸಖತ್​ ವೈರಲ್​ ಆಗಿದೆ.


Spread the love

About Laxminews 24x7

Check Also

ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!!

Spread the love ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!! ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ