Breaking News

ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್

Spread the love

ಬೆಂಗಳೂರು: ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಫೋಟೋಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ರಾಹುಲ್ ಕಮೆಂಟ್‍ಗೆ ಪ್ರತಿಕ್ರಿಯೆ ನೀಡಿರುವ ಫ್ಯಾನ್ಸ್, ಅಣ್ಣ ಈ ಪದದ ಅರ್ಥ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಬುಧವಾರ ಆಥಿಯಾ ಶೆಟ್ಟಿ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಿರರ್ ಸೆಲ್ಫಿ ಹಾಕಿಕೊಂಡಿದ್ದರು. ಇತ್ತ ನಟಿ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಕೆ.ಎಲ್.ರಾಹುಲ್, ಜೆಫಾ ಎಂದು ಕಮೆಂಟ್ ಮಾಡಿದ್ದಾರೆ. ಬಹುತೇಕರು ಜೆಫಾ ಅರ್ಥ ಹುಡುಕಲು ಗೂಗಲ್ ಮೊರೆ ಹೋಗಿದ್ದಾರೆ. ಇನ್ನು ಹಲವರು ಕೆ.ಎಲ್.ರಾಹುಲ್ ಅವರನ್ನ ಕೇಳಿದ್ದಾರೆ. ಗೂಗಲ್ ಮೊರೆ ಹೋದವರು ‘ಜೆಫಾ’ ಸ್ಪಾನಿಶ್ ಪದ. ಸ್ಪಾನಿಶ್ ನಲ್ಲಿ ಜೆಫಾ ಅಂದ್ರೆ ಬಾಸ್ ಎಂದರ್ಥ ಎಂದು ಹೇಳಿದ್ದಾರೆ.

ಆಥಿಯಾ ಶೆಟ್ಟಿ ಪೋಸ್ಟ್ ಮಾಡಿರುವ ಮಿರರ್ ಸೆಲ್ಫಿ ಫೋಟೋ ಸಖತ್ ವೈರಲ್ ಆಗಿದೆ. ಫೋಟೋಗೆ 1 ಲಕ್ಷಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ. ಆಥಿಯಾ ಮತ್ತು ಕೆ.ಎಲ್.ರಾಹುಲ್ ಒಬ್ಬರನ್ನೊಬ್ರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಕೆ.ಎಲ್.ರಾಹುಲ್ ಹುಟ್ಟುಹಬ್ಬದ ದಿನ ಗೆಳೆಯ ಫೋಟೋ ಶೇರ್ ಮಾಡಿಕೊಂಡಿದ್ದ ಆಥಿಯಾ ಬರ್ತ್ ಡೇ ವಿಶ್ ತಿಳಿಸಿದ್ದರು. ತದನಂತರ ಇಬ್ಬರು ಒಬ್ಬರೊನ್ನಬ್ಬರ ಫೋಟೋಗಳಿಗೆ ಕಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ತಮ್ಮ ಪ್ರೀತಿಯ ವಿಷಯವನ್ನು ಹೊರ ಹಾಕಿದ್ದಾರೆ. ಆದ್ರೆ ಇದುವರೆಗೂ ಅಧಿಕೃತವಾಗಿ ಎಲ್ಲಿಯೂ ಪ್ರೀತಿಯ ವಿಚಾರ ತಿಳಿಸಿಲ್ಲ.

ಐಪಿಎಲ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಮೂಲಕ ರಾಹುಲ್ ಹೆಸರಿನಲ್ಲಿದೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗಿ ರಾಹುಲ್ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಸೀಸನ್ 13ರ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಪಂದ್ಯದ ಫೈನಲ್ ನವೆಂಬರ್ 10 ರಂದು ನಡೆಯಲಿದೆ.

 


Spread the love

About Laxminews 24x7

Check Also

ಮುಡಾ ಹಗರಣ ಕೇಸ್‌ – ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್‌ ತುರ್ತು ನೋಟಿಸ್‌

Spread the loveಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರಿಗೆ ಕರ್ನಾಟಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ