Breaking News

ನಿರಂತರ ಮಳೆಯ ಎಫೆಕ್ಟ್: ಹೆಚ್ಚಾದ ಸೊಪ್ಪ, ತರಕಾರಿ ಬೆಲೆ: ಜನಸಾಮಾನ್ಯರ ಜೇಬಿಗೆ ಬರೆ

Spread the love

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ( Heavy Rain in Karnataka ) ಒಂದೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದರೇ, ಮತ್ತೊಂದೆಡೆ ರೈತರು ಬೆಳೆದಂತ ಬಳೆ ನೀರು ಪಾಲಾಗಿದೆ. ಸಮಯಕ್ಕೆ ಸರಿಯಾಗಿ ಕೊಯ್ಲಿಗೆ ಬಂದ ಬೆಳೆ ನೀರಲ್ಲಿ ಮುಳುಗಿ ಹೋಗಿದೆ.

ಇದೇ ಸಂದರ್ಭದಲ್ಲಿ ಸೊಪ್ಪು, ತರಕಾರಿ ಸಮಯಕ್ಕೆ ಸರಿಯಾಗಿ ಪೂರೈಕೆಯಾಗದೇ, ಬೆಲೆಗಳ ದರದಲ್ಲಿ ( Vegetables Price Hike ) ಹೆಚ್ಚಳ ಕಂಡಿದೆ. ಈ ಮೂಲಕ ಜನಸಾಮಾನ್ಯರ ಜೇಬಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ.

 

ಇದೇ ಕಾರಣದಿಂದಾಗಿ ಬೆಂಗಳೂರಿನಲ್ಲಿ ಬೀನ್ಸ್, ಈರುಳ್ಳಿ, ಟೊಮ್ಮಾಯೋ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ದರಗಳಲ್ಲಿಯೂ ಏರಿಕೆ ಕಂಡಿವೆ.

 

ಕಾರ್ತೀಕ ಮಾಸದ ಹಿನ್ನಲೆಯಲ್ಲಿ ಎಲ್ಲೆಡೆ ಮದುವೆ, ಗೃಹಪ್ರವೇಶ, ನಾಮಕರಣದಂತ ಕಾರ್ಯಮಗಳು ನಡೆಯುತ್ತಿವೆ. ಬೇಡಿಕೆಯಷ್ಟು ಸೊಪ್ಪು, ತರಕಾರಿ ಮಳೆಯಿಂದಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದೇ ಇರೋದೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

 

ಹೀಗಿದೆ ತರಕಾರಿ ದರ

  • ಮೆಣಸಿನಕಾಯಿ – ರೂ.130
  • ಉದ್ದ ಬದನೆಕಾಯಿ – ರೂ.92
  • ಬೆಂಡೆಕಾಯಿ – ರೂ.76
  • ಮೂಲಂಗಿ – ರೂ.62
  • ಟೊಮ್ಯಾಟೋ – ರೂ.93
  • ನುಗ್ಗೇ ಕಾಯಿ – ರೂ.234
  • ದೋಣಿ ಮೆಣಸಿನಕಾಯಿ – ರೂ.130
  • ಹೀರೇಕಾಯಿ – ರೂ.90
  • ಹೂಕೋಸು – ಒಂದಕ್ಕೆ 54 ರೂ

ಹೀಗಿದೆ ಸೊಪ್ಪಿನ ಬೆಲೆ

  • ಹರಿವೆ ಸೊಪ್ಪು – 1 ಕೆಜಿಗೆ ರೂ.72
  • ಮೆಂತ್ಯ – ರೂ.135
  • ಪಾಲಕ್ – ರೂ.100
  • ದಂಟಿನ ಸೊಪ್ಪು – ರೂ.72
  • ಸಬ್ಬಸಿಗೆ – ರೂ.80
  • ಪಾಲಕ್ – ರೂ.100
  • ನಾಟಿ ಕೊತ್ತಂಬರಿ – ರೂ.88

Spread the love

About Laxminews 24x7

Check Also

ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….

Spread the love ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ