ನವದೆಹಲಿ : ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು (Dearness Allowance) 31 ಶೇ. ಕ್ಕೆ ಹೆಚ್ಚಿಸಲಾಗಿದೆ. ಇದು ಜುಲೈ 1 ರಿಂದಲೇ ಇದು ಅನ್ವಯವಾಗಲಿದೆ. ಅಂದರೆ ಸರ್ಕಾರವು ತನ್ನ ನೌಕರರಿಗೆ 4 ತಿಂಗಳ ತುಟ್ಟಿಭತ್ಯೆಯ ಬಾಕಿಯನ್ನು (Dearness Allowance Arrear)ಸಹ ನೀಡಲಿದೆ.
ಆದರೆ, 18 ತಿಂಗಳಿಂದ ಬಾಕಿ ಉಳಿದಿರುವ ತುಟ್ಟಿಭತ್ಯೆ ಬಾಕಿಯ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಕೇಂದ್ರ ನೌಕರರ ಡಿಎ (DA)ಬಾಕಿ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಕೇಂದ್ರ ನೌಕರರಿಗೆ ಸಂತಸದ ಸುದ್ದಿ :
7ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ಕೇಂದ್ರ ಸರ್ಕಾರವು ನೌಕರರಿಗೆ 31 ಶೇ. ಡಿಎ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡಿದೆ. ಆದರೆ, ಡಿಎ ಬಾಕಿ ಪ್ರಕರಣ 18 ತಿಂಗಳಿಂದ ಬಾಕಿ ಇದೆ. ಈ ಬಗ್ಗೆ ಮಾತನಾಡಿದ ಜೆಸಿಎಂ (JCM)ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಮಾತನಾಡಿ, 18 ತಿಂಗಳಿಂದ ಬಾಕಿ ಉಳಿದಿರುವ ಡಿಎ (DA) ಯನ್ನು ಶೀಘ್ರವೇ ಇತ್ಯರ್ಥಪಡಿಸಬೇಕು ಎಂದು ಕೌನ್ಸಿಲ್ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ ಎಂದು ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಡಿಎ ಬಾಕಿ ಇರುವ ವಿಚಾರವಾಗಿ ಸಂಪುಟ ಕಾರ್ಯದರ್ಶಿ ಜತೆ ಚರ್ಚೆ ನಡೆಸುವ ಬಗ್ಗೆ ನಿರೀಕ್ಷಿಸಲಾಗಿದೆ.
ಎಷ್ಟು ಡಿಎ ಬಾಕಿ ಸಿಗುತ್ತದೆ?
ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (JCM) ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಪ್ರಕಾರ, ಲೆವೆಲ್-1 ನೌಕರರ ಡಿಎ (Dearness Allowance Arrear)ಬಾಕಿ 11,880 ರಿಂದ 37 ಸಾವಿರ ರೂ. ಇದೆ. ಲೆವೆಲ್-13 ನೌಕರರಿಗೆ ಡಿಎ ಬಾಕಿ 1 ಲಕ್ಷದ 44 ಸಾವಿರದ 200 ರಿಂದ 2 ಲಕ್ಷದ 18 ಸಾವಿರದ 200 ರೂ. ಇದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ತುಟ್ಟಿಭತ್ಯೆ ಮರುಸ್ಥಾಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ…