ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ( karnataka chalanachitra vanijya mandali ) ಚುನಾವಣೆಯನ್ನು ( Election ) ಕೂಡಲೇ ನಡೆಸುವಂತೆ, ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಆದೇಶಿಸಿದ್ದಾರೆ.
‘
ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವಂತ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಸ್ಥೆಯ ಸಮಿತಿಗೆ ಅವಧಿ ಮುಗಿದು ಈಗಾಗಲೇ ವರ್ಷಗಟ್ಟಲೇ ಗತಿಸಿದರೂ ಸಹ ಚುನಾವಣೆಗೆ ಸಂಸ್ಥೆಯಿಂದ ಕ್ರಮವಿಟ್ಟಿರುವುದಿಲ್ಲ.
ಚುನಾವಣೆಯನ್ನು ಇಲಾಖೆಯ ಚುನಾವಣಾಧಿಕಾರಿಗಳಿಂದ ಮುದ್ರಿತ ಮತಪತ್ರದ ಮೂಲಕ ಕೂಡಲೇ ಚುನಾವಣೆ ನಡೆಸಲು ಸಂಸ್ಥೆಗೆ ನಿರ್ದೇಶನ ನೀಡಲು ಭಾ.ಮಾ.ಹರೀಶ್ ಮತ್ತು ಇತರರು ಈ ಕಚೇರಿಗೆ ಕೋರಿರುತ್ತಾರೆ.
ಈಗಾಗಲೇ ಸರ್ಕಾರ ದೂರಿನ ಅಂಶಗಳ ಬಗ್ಗೆ ದಾಖಲೆ ಪರಿಶೀಲನೆ ನಿರ್ದೇಶನ ನೀಡಿದ್ದು, ಈ ಅಂಶಗಳ ಪರಿಶೀಲನೆ ಕಾಯ್ದಿರಿಸಿದೆ. ಮಧ್ಯಂತರ ಆದೇಶದಲ್ಲಿ ಸಂಸ್ಥೆಯ ಹಣಕಾಸು ಖರ್ಚು ವೆಚ್ಚಗಳಿಗೆ ವಿಧಿಸಿದ ನಿರ್ಬಂಧಗಳನ್ನು ಮುಂದುವರೆಸಿದೆ. ಸರ್ಕಾರವು ಕೋವಿಡ್ ನಿರ್ಬಂಧಗಳನ್ನು ತೆರವುಗೊಳಿಸಿ, ಸಂಘ-ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಕೂಡಲೇ ಕ್ರಮವಿಡಲು ಪತ್ರದಲ್ಲಿ ತಿಳಿಸಿರುವ ಹಿನ್ನಲೆಯಲ್ಲಿ ಹಾಗೂ ಅರ್ಜಿದಾರರ ಕೋರಿಕೆಯು ಸಮಂಜಸವಾಗಿದ್ದು, ಅದರಂತೆ ಇಲಾಖೆಯ ಚುನಾವಣಾಧಿಕಾರಿ ನೇಮಿಸಿಕೊಂಡು, ಪಾರದರ್ಶಕವಾಗಿ ನಿಯಮಾನುಸಾರ ನಿಷ್ಪಕ್ಷವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯನ್ನು ಕೂಡಲೇ ನಡೆಸಲು ತಿಳಿಸಿದ್ದಾರೆ.