Breaking News

ಚಿಕ್ಕೋಡಿ – ​ಪ್ರಕೃತಿ ವಿಕೋಪ ಪರಿಹಾರ ನಿಧಿಯ ನೆರವನ್ನು ಪಡೆಯಲು ವರ್ಷಗಳ ಕಾಲ ಅಡ್ಡಾಡಬೇಕಾದ ಸಂದರ್ಭದಲ್ಲಿ ಗೋಡೆ ಬಿದ್ದು ಮೃತನಾದ ವ್ಯಕ್ತಿಯ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಶಾಸಕ ಗಣೇಶ ಹುಕ್ಕೇರಿ ಚೆಕ್ ವಿತರಿಸಿದರು. ​ಬುಧವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿ​ ​ ಮನೆ ಛಾವಣಿ ಕುಸಿದು ಬಿದ್ದು​ ಸದಲಗಾ ನಿವಾಸಿ​ ಕಲ್ಲಪ್ಪ ಪರಗೌಡ​  ನಿಧನ​ರಾದರು.​ ಈ ಸುದ್ದಿ ತಿಳಿದ ಕೂಡಲೇ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಶಾಸಕ​ ಗಣೇಶ ಪ್ರಕಾಶ ಹುಕ್ಕೇರಿ​ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.​ ಅಲ್ಲದೆ, ​ ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಸಾಂತ್ವನ ​ಹೇಳಿದರು.  ತಕ್ಷಣವೇ ಸರಕಾರದಿಂದ 5 ಲಕ್ಷ ರೂಪಾಯಿಗ​ಳನ್ನು ಮಂಜೂರು ಮಾಡಿಸಿ​ ಚೆಕ್ ಕೂಡ ವಿತರಿಸಿದರು. ಅಲ್ಲದೆ, ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಿದರು. ​ಈ ಸಂದರ್ಭದಲ್ಲಿ ತಾಲೂಕಿನ ಉಪ​ವಿಭಾಗಾ​ಧಿಕಾರಿ​ ರವೀಂದ್ರ ಕರಲಿಂಗಣ್ಣವರ, ಸದಲಗಾ​ ಸಿಪಿಐ​, ಪಿಎಸ್ಐ​ ಹಾಗೂ ತಹಶೀಲ್ದಾರ್ ​ ಉಪಸ್ಥಿತರಿದ್ದರು​.​

Spread the love

ಚಿಕ್ಕೋಡಿ – ​ಪ್ರಕೃತಿ ವಿಕೋಪ ಪರಿಹಾರ ನಿಧಿಯ ನೆರವನ್ನು ಪಡೆಯಲು ವರ್ಷಗಳ ಕಾಲ ಅಡ್ಡಾಡಬೇಕಾದ ಸಂದರ್ಭದಲ್ಲಿ

ಚಿಕ್ಕೋಡಿ – ​ಪ್ರಕೃತಿ ವಿಕೋಪ ಪರಿಹಾರ ನಿಧಿಯ ನೆರವನ್ನು ಪಡೆಯಲು ವರ್ಷಗಳ ಕಾಲ ಅಡ್ಡಾಡಬೇಕಾದ ಸಂದರ್ಭದಲ್ಲಿ ಗೋಡೆ ಬಿದ್ದು ಮೃತನಾದ ವ್ಯಕ್ತಿಯ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಶಾಸಕ ಗಣೇಶ ಹುಕ್ಕೇರಿ ಚೆಕ್ ವಿತರಿಸಿದರು.
​ಬುಧವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿ​  ಮನೆ ಛಾವಣಿ ಕುಸಿದು ಬಿದ್ದು ಸದಲಗಾ ನಿವಾಸಿ​ ಕಲ್ಲಪ್ಪ ಪರಗೌಡ​  ನಿಧನ​ರಾದರು.​
ಈ ಸುದ್ದಿ ತಿಳಿದ ಕೂಡಲೇ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಶಾಸಕ​ ಗಣೇಶ ಪ್ರಕಾಶ ಹುಕ್ಕೇರಿ​ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.​ ಅಲ್ಲದೆ, ​
ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಸಾಂತ್ವನ ​ಹೇಳಿದರು. 
ತಕ್ಷಣವೇ ಸರಕಾರದಿಂದ 5 ಲಕ್ಷ ರೂಪಾಯಿಗ​ಳನ್ನು ಮಂಜೂರು ಮಾಡಿಸಿ​ ಚೆಕ್ ಕೂಡ ವಿತರಿಸಿದರು. ಅಲ್ಲದೆ, ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಿದರು.
​ಈ ಸಂದರ್ಭದಲ್ಲಿ ತಾಲೂಕಿನ ಉಪ​ವಿಭಾಗಾ​ಧಿಕಾರಿ​ ರವೀಂದ್ರ ಕರಲಿಂಗಣ್ಣವರ, ಸದಲಗಾ​ ಸಿಪಿಐ​, ಪಿಎಸ್ಐ​ ಹಾಗೂ ತಹಶೀಲ್ದಾರ್ ​ ಉಪಸ್ಥಿತರಿದ್ದರು​.​

About Laxminews 24x7

Check Also

ಬೋರಗಾಂವ ವೃತ್ತದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ‌ಇಂದು‌ ಚಾಲನೆ ನೀಡಿದ ಪ್ರಿಯಾಂಕ ಸತೀಶ್ ಜಾರಕಿಹೊಳಿ

Spread the love ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕುಮಾರಿ ಪ್ರಿಯಾಂಕ ಸತೀಶ್ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ನಿಪ್ಪಾಣಿ‌ ವಿಧಾನಸಭಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ