ರಾಯಬಾಗ: ಚಿಕ್ಕ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆ ಕಂಡು ಭಿಕ್ಷುಕ ಮಹಿಳೆಯನ್ನ ಹಿರಿಯ ನ್ಯಾಯಾಧೀಶ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಮಾಯಕ್ಕಾ ದೇವಸ್ಥಾನದ ಆವರಣದಲ್ಲಿ ಇಬ್ಬರು ಮಕ್ಕಳನ್ನ ಕರೆದುಕೊಂಡು ಮಹಿಳೆ ಭಿಕ್ಷೆ ಬೇಡುತ್ತಿದ್ದಳು ಇದೆ ದೇವಸ್ಥಾನಕ್ಕೆಂದು ಆಗಮಿಸಿದ್ದ ರಾಯಭಾಗದ ಹಿರಿಯ ನ್ಯಾಯಾಧೀಶ ಬಸವರಾಜಪ್ಪ ಕೆ ಎಂ, ಮಹಿಳೆಯನ್ನ ಕರೆಸಿ ಯಾಕೆ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿರಿ. ಎಲ್ಲಾದರೂ ಕೆಲಸ ಮಾಡಿ ಜೀವನ ಮಾಡಬೇಕು. ಅಲ್ಲದೆ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡುತ್ತಿದ್ದೀರಿ. ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸಾಕಲು ಆಗಲ್ಲಾ ಅಂದ್ರೆ ನಿಮ್ಮ ಮಕ್ಕಳನ್ನ ನಾನೆ ಕರೆದುಕೊಂಡು ಹೋಗಿ ಸಾಕುತ್ತೇನೆ. ನಮ್ಮ ಬಳಿ ಮಕ್ಕಳಿಗಾಗಿ ಒಳ್ಳೆಯ ವ್ಯವಸ್ಥೆ ಇದೆ. ಎಂದು ತರಾಟೆಗೆ ತೆಗೆದುಕೊಂಡು ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲದೆ ದೇವಸ್ಥಾನದ ಆವರಣದಲ್ಲೆ ಮಕ್ಕಳು ಭಿಕ್ಷೆ ಬೇಡುತ್ತಿದ್ದರೂ ಪೊಲೀಸರು ಸುಮ್ಮನೇಕೆ ಇದ್ದೀರಿ ಎಂದು ಪೊಲೀಸರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					