ಚಾಮರಾಜನಗರ: ಗಿರವಿ ಇಟ್ಟಿದ್ದಂತ ಚಿನ್ನದ ಸರವನ್ನು ಬಿಡಿಸಿಕೊಡೋ ಸಂಬಂಧ, ಪತಿ-ಪತ್ನಿಯರ ನಡುವೆ ಜಗಳವಾಗಿದೆ. ಇದೇ ವಿಚಾರ ತಾರಕಕ್ಕೇರಿದ್ದರಿಂದ ಪತ್ನಿಯನ್ನೇ ಪತಿರಾಯ ಹತ್ಯೆಗೈದಿದ್ದಾನೆ. ಈ ವಿಷಯವನ್ನು ಕೋರ್ಟ್ ನಲ್ಲಿ ಸಾಕ್ಷ್ಯವಾಗಿ ಅಪ್ಪನ ವಿರುದ್ಧವೇ ಮಗಳು ಸಾಕ್ಷ್ಯ ಹೇಳಿದ್ದರಿಂದಾಗಿ, ಇದೀಗ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
