ಬೆಳಗಾವಿ : ಗಣೇಶ ಹಬ್ಬಕ್ಕೆ ಕೊರೊನಾ ಕರಿನೆರಳು ಬಿದ್ದಿದ್ದು, ವಿಘ್ನಗಳ ಮೂರ್ತಿ ತಯಾರಿಕಾ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ವಿಘ್ನಗಳ ವಿನಾಶಕನೇ ಗಣೇಶ ಎಂಬ ಕಾರಣ ಪ್ರತಿಯೊಂದು ಸಮಾರಂಭದಲ್ಲಿ ಗಜಾನನ ಪೂಜೆ ನಡೆಸಲಾಗುತ್ತದೆ. ಆದ್ರೆ ಈ ಬಾರಿ ಗಣೇಶ ಹಬ್ಬಕ್ಕೆ ಮೂರ್ತಿ ತಯಾರಿಕ ಕುಟುಂಬಕ್ಕೆ ಈ ಮಾತು ಅಕ್ಷರಶಃ ಸುಳ್ಳಾಗಿದೆ.
ಅಥಣಿ ಪಟ್ಟನದಲ್ಲಿವಂಶ ಪಾರಂಪರಿಕವಾಗಿ ಗಣೇಶ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿಕೊಂಡಿರುವ 15ಕ್ಕೂ ಹೆಚ್ಚು ಕುಟುಂಬಗಳು ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ.
ರಾಜ್ಯಸರ್ಕಾರ ಸಾರ್ವಜನಿಕ ವಲಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ನಿಯಮನುಸಾರ ಹೊರಡಿಸಿದ ಬೆನ್ನಲ್ಲೇ ಮುರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿರುವ ಕುಂಟುಂಳಿಗೆ ಬಾರಿ ಆಘಾತ ಉಂಟುಮಾಡಿದೆ.
ಸರ್ಕಾರದ ನಿಯಮಕ್ಕೆ ಕೆಲವರು ಹೆದರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯಾರು ಮುಂದೆ ಬರ್ತಿಲ್ಲ, ಹಾಗೂ ಬೇಡಿಕೆಯೂ ಇಲ್ಲದೆ ಈ ವರ್ಷ ನಮಗೆ ಬಾರಿ ನಷ್ಟ ಸಂಭವಿಸಿದೆ ಎಂದು ಮೂರ್ತಿ ತಯಾರಕರಾದ ಆನಂದ ಬಡಿಗೇರ ಕುಟುಂಬ ಕಳವಳ ವ್ಯಕ್ತಪಡಿಸಿದರು.
ಪ್ರತಿ ವರ್ಷ ಗಣೇಶ ಚುತುರ್ತೀ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಈ ವರ್ಷ ಕೊರೊನಾನಿಂದ ಗಣೇಶ ಮೂರ್ತಿ ಖರೀದಿಗೆ ಮುಂದಾಗುತ್ತಿಲ್ಲ. ಕಳೆದ 6 ತಿಂಗಳ ಮೊದಲ ಮನೆಯವರೆಲ್ಲೂ ಈ ವೃತ್ತಿಯಲ್ಲಿ ತೊಡಗಿದ್ದೆವೆ. ಆದರೆ ಕಾರ್ಯಕ್ಕೆ ತಕ್ಕಂತೆ ಪ್ರತಿಫಲ ವಿಲ್ಲದಾಗಿದೆ. ಸರ್ಕಾರ ಮೂರ್ತಿ ತಯಾರಿಕಾ ಕುಟುಂಗಳ ಮೇಲೆ ಗಮನ ಹರಿಸುವ ಮೂಲಕ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಅಂದ ಚಂದವಾಗಿ ವಿಘ್ನ ನಿವಾರಕನನ್ನು ಪಾರಂಪರಿಕವಾಗಿ ನಂಬಿಕೊಂಡು
ನಿರ್ಮಾಣ ಮಾಡುವ ಕುಟುಂಬಗಳಿಗೆ ಕೊರೊನಾ ವೈರಸ್ ನಿಂದ ಆಘಾತ ಉಂಟುಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಬೇಕಿದೆ.
https://www.facebook.com/105350550949710/posts/189956125822485/?sfnsn=wiwspmo&extid=PXaJELIS086N14Mr&d=n&vh=e