Breaking News

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರನ್ನು ನಮ್ರತಾ ಎಂಬ ವಿದ್ಯಾರ್ಥಿನಿ ಜೀವನದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾಳೆ.

Spread the love

ಕೊಡಗು: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರನ್ನು ನಮ್ರತಾ ಎಂಬ ವಿದ್ಯಾರ್ಥಿನಿ ಜೀವನದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾಳೆ. ವ್ಯಕ್ತಿಯೊಬ್ಬರು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಗ್ರಾಮದ ಬಳಿ ಕೆರೆಗೆ ಹಾರಿದ್ದರು. ಆ ವೇಳೆ ವ್ಯಕ್ತಿ ಮುಳುಗುತ್ತಿರುವುದನ್ನು ನೋಡಿದ ವಿದ್ಯಾರ್ಥಿನಿ ನಮ್ರತಾ ಹಿಂದೆಮುಂದೆ ಯೋಚಿಸದೆ, ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾಳೆ. 10 ಅಡಿಗೂ ಅಧಿಕ ಆಳವಿದ್ದ ಕೆರೆ ಅದಾಗಿದೆ. ವಿದ್ಯಾರ್ಥಿನಿ ನಮ್ರತಾಳ ಈ ಸಾಹಸಕ್ಕೆ ಎಲ್ಲರ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿದೆ. ನಮ್ರತಾ (17) ಗೋಣಿಕೊಪ್ಪಲು ಸರ್ವದೈವತಾ ಪಿಯು ಕಾಲೇಜಿನ ವಿದ್ಯಾರ್ಥಿನಿ.

puc girl student rescues man who attempted to suicide by jumping into lake in gonikoppal

ಪ್ರಾಣದ ಹಂಗು ತೊರೆದು 10 ಅಡಿಗೂ ಅಧಿಕ ಆಳವಿದ್ದ ಕೆರೆಗೆ ಹಾರಿ ವ್ಯಕ್ತಿಯ ರಕ್ಷಣೆ ಮಾಡಿದ ವಿದ್ಯಾರ್ಥಿನಿ ನಮ್ರತಾ


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ