Breaking News

ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 206 ಪ್ರಕರಣಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ‍ಪತ್ತೆ:S.P. ಲಕ್ಷ್ಮಣ ನಿಂಬರಗಿ

Spread the love

ಬೆಳಗಾವಿ : ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 206 ಪ್ರಕರಣಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ‍ಪತ್ತೆ ಹಚ್ಚಿದ್ದು, ₹ 8.58 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ
ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು, ಕಾಗವಾಡ, ಚಿಕ್ಕೋಡಿ, ಅಥಣಿ, ಗೋಕಾಕ, ಅಂಕಲಿ, ಮುರಗೋಡ, ಘಟಪ್ರಭಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ‍ಪ್ರಕರಣಗಳಲ್ಲಿ ಸಿಇಎನ್ ಅಪರಾಧ ಠಾಣೆಯಿಂದ 2020ರಲ್ಲಿ ₹ 10.97 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

2020ರಲ್ಲಿ ₹ 1.10 ಕೋಟಿ ಹಾಗೂ 2021ರಲ್ಲಿ ₹ 10,06,850 ಕಳವಾಗಿತ್ತು. ಅದನ್ನೂ ಕಳ್ಳರಿಂದ ಜಪ್ತಿ ಮಾಡಲಾಗಿದೆ. ಜಾನುವಾರು, ಅರಿಸಿನ, ಧಾನ್ಯ, ಟೈಯರ್‌ಗಳು ಮತ್ತಿತರ ವಸ್ತುಗಳನ್ನು ಕಳವು ಮಾಡಿರುವುದು ವರದಿಯಾಗಿದೆ.

ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಕಳೆದುಕೊಂಡವರು ಅಥವಾ ವಾರಸುದಾರರಿಗೆ ಮರಳಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

2020ರಲ್ಲಿ ₹ 1.05 ಕೋಟಿ ಮೌಲ್ಯದ 2 ಕೆ.ಜಿ. 336 ಗ್ರಾಂ. ಚಿನ್ನ, ₹ 7.74 ಲಕ್ಷ ಮೌಲ್ಯದ 17 ಕೆ.ಜಿ. 881 ಗ್ರಾಂ. ಬೆಳ್ಳಿ, 2021ರಲ್ಲಿ ₹ 27.25 ಲಕ್ಷ ಮೌಲ್ಯದ 702.24 ಗ್ರಾಂ. ಚಿನ್ನಾಭರಣ ಮತ್ತು ₹ 52,900 ಮೌಲ್ಯದ 1 ಕೆ.ಜಿ. 275 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ₹ 47.35 ಲಕ್ಷ ಮೌಲ್ಯದ 168 ದ್ವಿಚಕ್ರವಾಹನಗಳು, 22 ಕಾರುಗಳು ಹಾಗೂ 32 ಮೊಬೈಲ್‌ ಫೋನ್‌ಗಳ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ