ರಾಯಚೂರು: ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ರಾಯಚೂರಿನ ಕುರ್ವಕಲಾ ನಡುಗಡ್ಡೆ ಗ್ರಾಮದ ನಾಲ್ವರಿಗಾಗಿ ಶೋಧ ಕಾರ್ಯ ಬೆಳಗ್ಗೆಯಿಂದ ಆರಂಭವಾಗಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ ರಕ್ಷಿಸಲಾಗಿತ್ತು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ನಾಪತ್ತೆಯಾಗಿರುವ ನಾಲ್ವರ ಶೋಧಕಾರ್ಯವನ್ನು ತೆಲಂಗಾಣದ ಪಂಚಮಪಾಡ್ ಬಳಿ ಆರಂಭಿಸಿದೆ.
ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ ರಕ್ಷಿಸಲಾಗಿತ್ತು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ನಾಪತ್ತೆಯಾಗಿರುವ ನಾಲ್ವರ ಶೋಧಕಾರ್ಯವನ್ನು ತೆಲಂಗಾಣದ ಪಂಚಮಪಾಡ್ ಬಳಿ ಆರಂಭಿಸಿದೆ.
ಎನ್‍ಡಿಆರ್‍ಎಫ್‍ನ 23 ಜನ, ಅಗ್ನಿಶಾಮಕ ದಳದ 12 ಜನ ಸಿಬ್ಬಂದಿ, 3 ಬೋಟ್ ಮೂಲಕ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಸೋಮವಾರ ದಿನಸಿ ತರಲು ಪಂಚಮಪಾಡ್‍ಗೆ ತೆಪ್ಪದಲ್ಲಿ ತೆರಳಿದ್ದ 13 ಜನ ವಾಪಸ್ ನಡುಗಡ್ಡೆಗೆ ಮರಳುವಾಗ ತೆಪ್ಪ ಮುಗಚಿ ಬಿದ್ದಿತ್ತು. ಕೂಡಲೇ ನದಿ ದಡದಲ್ಲಿದ್ದ ಅಂಬಿಗರು 9 ಜನರನ್ನ ರಕ್ಷಿಸಿದ್ದರು.
ಮೂವರು ಮಹಿಳೆಯರು ಹಾಗೂ ಓರ್ವ ಬಾಲಕಿ ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದಾರೆ. ಕುರ್ವಕಲಾ ಗ್ರಾಮದ ಪಾರ್ವತಿ (55), ನರಸಮ್ಮ (36), ಸುಮಲತಾ (32), ರೋಜಾ (10) ನಾಪತ್ತೆಯಾದವರು. ಸದ್ಯ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
Laxmi News 24×7