ನವದೆಹಲಿ: ಮನೆ ಮನೆಗೆ ತೆರಳಿ ಕರೋನ ಲಸಿಕೆಯನ್ನು ಹಾಕಿ ಅಂತ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ಇಂದು ಕೋವಿಡ್-19 ಲಸಿಕೆ ವ್ಯಾಪ್ತಿಯಲ್ಲಿ ಹಿಂದುಳಿದಿರುವ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವ್ರು ಬುಧವಾರ ಕೋವಿಡ್-19 ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವ ಅಗತ್ಯವನ್ನ ಒತ್ತಿ ಹೇಳಿದರು. ಇನ್ನು ಈ ಸಡಿಲತೆ ಮುಂದುವರಿದ್ರೆ, ಹೊಸ ಬಿಕ್ಕಟ್ಟು ಎದುರಾಗುವುದು ಎಂದು ಎಚ್ಚರಿಕೆ ನೀಡಿದ್ರು.
ಕಡಿಮೆ ಕೋವಿಡ್-19 ಲಸಿಕೆ ವ್ಯಾಪ್ತಿಯನ್ನ ಹೊಂದಿರುವ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ʼಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತ್ರ ಪ್ರಧಾನಿ ಮೋದಿ ಮಾತನಾಡಿದ್ರು. ಸಾಮಾಜಿಕ ಮಾಧ್ಯಮಗಳನ್ನ ಬಳಸಿಕೊಂಡು ಲಸಿಕೆಯ 2ನೇ ಡೋಸ್ ಪ್ರಮುಖ್ಯತೆಯನ್ನ ಸಾರುವಂತೆ ನಾಗರಿಕರನ್ನ ಒತ್ತಾಯಿಸಿದರು. ಇನ್ನು ಇದೇ ವೇಳೆ ‘ಕೋವಿಡ್ ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವದಂತಿಗಳ ವಿರುದ್ಧ ಹೋರಾಡಲು ನೀವು ಸ್ಥಳೀಯ ಧಾರ್ಮಿಕ ನಾಯಕರ ಸಹಾಯವನ್ನ ಪಡೆಯಬಹುದು’ ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಮಹಿಳಾ ಸರ್ಕಾರಿ ಕಾರ್ಮಿಕರು, ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಮಾಡಿದ ಪ್ರಯತ್ನಗಳನ್ನ ಪ್ರಧಾನಿ ಶ್ಲಾಘಿಸಿದರು. ‘ಇಲ್ಲಿಯವರೆಗೆ ಆಗಿರುವ ಪ್ರಗತಿಗೆ ನಿಮ್ಮ ಕಠಿಣ ಪರಿಶ್ರಮವೇ ಕಾರಣ. ಆಶಾ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡಿದರು ಮತ್ತು ಮೈಲುಗಟ್ಟಲೆ ನಡೆದು, ದೂರದ ಸ್ಥಳಗಳಿಗೆ ಲಸಿಕೆಯನ್ನ ತೆಗೆದುಕೊಂಡು ಹೋದ್ರು. ಆದ್ರೆ, 1 ಬಿಲಿಯನ್ ಲಸಿಕೆಗಳನ್ನ ನೀಡಿದ ನಂತ್ರ ನಾವು ಸಡಿಲರಾದ್ರೆ, ಹೊಸ ಬಿಕ್ಕಟ್ಟು ಬರಬಹುದು’ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಕಡಿಮೆ ಕೋವಿಡ್-19 ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳಲ್ಲಿ ಲಸಿಕೆಯನ್ನ ಹೆಚ್ಚಿಸಲು ನವೀನ ಮಾರ್ಗಗಳನ್ನ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.