ಬೆಳಗಾವಿಯಲ್ಲಿ ಆಯೋಜಿಸಿರುವ ನಿಸರ್ಗದ ಬಗೆಗಿನ ಮನಮೋಹಕ ಚಿತ್ರಗಳ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಸಾಕಷ್ಟು ವಿದ್ಯಾರ್ಥಿಗಳು, ಪೇಂಟಿಂಗ್ಸ್ ರಸಿಕರನ್ನು ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹೌದು ಬೆಳಗಾವಿಯ ಟಿಳಕವಾಡಿಯಲ್ಲಿರುವ ಕೆ.ಬಿ.ಕುಲಕರ್ಣಿ ಆರ್ಟ ಗ್ಯಾಲರಿಯ ವರೆರ್ಕರ್ ನಾಟ್ಯಗ್ರಹದಲ್ಲಿ ಅಕ್ಟೋಬರ್ 25ರಿಂದ ಅಕ್ಟೋಬರ್ 31ವರೆಗೆ ನಿಸರ್ಗದ ಬಗೆಗಿನ ಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಿವಿಧ ಕಾಲೇಜು, ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿ ನಿಸರ್ಗದ ರಮಣೀಯ ಚಿತ್ರಗಳನ್ನು ಕಣ್ತುಂಬಿಕೊಂಡರು. ಎಲ್ಲ ಚಿತ್ರಗಳು ಕೂಡ ನಮ್ಮ ನಿಸರ್ಗವನ್ನು ಕಾಪಾಡುವ ಬಗ್ಗೆ ಸಂದೇಶವನ್ನು ಸಾರುತ್ತಿವೆ. ಇನ್ನು ಈ ಬಗ್ಗೆ ನಿತಿನ್ ಕಪಿಲೇಶ್ವರ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿ ಹೆಚ್ಚಿನ ಮಾಹಿತಿ ನೀಡಿದರು.
ಬಳಿಕ ಚಿತ್ರ ಕಲಾವಿದರಾದ ಕವಿತಾ ಚಿಕ್ಕೋಡಿ ಮಾತನಾಡಿ ಚಿತ್ರಸಂತೆ ಮೈಸೂರು ದಸರಾದಲ್ಲಿ ನನ್ನ ಪೇಂಟಿಂಗ್ಸ್ ಮಾರಾಟ ಮಾಡುತ್ತಿದ್ದೆ. ಇದೇ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ್ದೇನೆ. ನಮ್ಮ ಪತಿಯ ನೇಟಿವ್ ಬೆಳಗಾವಿ. ಹೀಗಾಗಿ 20 ವರ್ಷದ ನಂತರ ಇಲ್ಲಿಗೆ ಬಂದಿದ್ದೇನೆ. ಕೊಲ್ಹಾಪುರ ಕಲಾವಿದರ ಜೊತೆಗೆ ನಾನು ಸಧ್ಯ ಕೆಲಸ ಮಾಡುತ್ತಿದ್ದೇನೆ. ನಿಸರ್ಗದಲ್ಲಿ ನಡೆಯುತ್ತಿರುವ ಮಾಲಿನ್ಯದ ಬಗ್ಗೆ ಚಿತ್ರದಲ್ಲಿ ತೋರಿಸಲಾಗುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕು, ಪರಿಸರ ಮಾಲಿನ್ಯ ನಿಲ್ಲಬೇಕು ಎಂಬ ಸಂದೇಶವನ್ನು ನೀಡುತ್ತಿವೆ ಎಂದರು.
ಒಟ್ಟಿನಲ್ಲಿ ಮನಮೋಹಕ ಚಿತ್ರಗಳ ಮೂಲಕ ನಮ್ಮ ಸುತ್ತಮುತ್ತಲಿನ ನಿಸರ್ಗವನ್ನು ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನಿಯವೇ ಸರಿ.