Breaking News

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್; ವಕೀಲ ರಾಜೇಶ್ ಭಟ್ ಗೆ ಸಹಾಯ ಮಾಡಿದ್ದ ಸ್ನೇಹಿತ ಅರೆಸ್ಟ್

Spread the love

ಮಂಗಳೂರು: ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ರಾಜೇಶ್ ಭಟ್ ನಾಪತ್ತೆಯಾಗಿದ್ದು, ಆತನಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಸ್ನೇಹಿತ ಅನಂತ್ ಭಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬೊಂದೆಲ್ ನಿವಾಸಿ ಅನಂತ್ ಭಟ್, ವಕೀಲ ರಾಜೇಶ್ ಭಟ್ ಪರಾರಿಯಾಗಲು ಸಹಾಯ ಮಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಅನಂತ್ ಭಟ್ ನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ.

ರಾಜೇಶ್ ತಪ್ಪಿಸಿಕೊಳ್ಳಲು ಬಳಸಿದ್ದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ನಾಪತ್ತೆಯಾಗಿರುವ ರಾಜೇಶ್ ಭಟ್ ಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.


Spread the love

About Laxminews 24x7

Check Also

ಶ್ರೀಶೈಲದಿಂದ‌ ವಾಪಸ್ ಬರುವಾಗ ಕ್ರೂಸರ್ ಅಪಘಾತ ; ಬೆಳಗಾವಿ ಮೂಲದ ಮೂವರು ಸಾವು

Spread the loveಬೆಳಗಾವಿ : ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದುಕೊಂಡು ಮರಳಿ ಬರುವ ವೇಳೆ ಕ್ರೂಸರ್ ವಾಹನ‌ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ