ಸಿಂಧನೂರು :ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ರಾಯಚೂರು ಜಿಲ್ಲಾ ಜಾರಕಿಹೊಳಿ ಅಭಿಮಾನ ಬಳಗದ ವತಿಯಿಂದ ಕರುನಾಡಿನ ಕಾರುಣ್ಯ ಕಣ್ಮಣಿಗಳು ಕಾರುಣ್ಯ ಕುಟುಂಬದ ನಿರಂತರ ಮಾರ್ಗದರ್ಶಕರು ಕಾರುಣ್ಯ ಕರುಣಾಮಯಿಗಳು ಕಾರುಣ್ಯ ಕುಟುಂಬದ ಯಜಮಾನರಾದಂತಹ ಕರುನಾಡಿನ ಕಾರುಣ್ಯ ಕುಟುಂಬದ ಅಧಿಕಾರಿಗಳಾದ
ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು ಗೋಕಾಕ ವಿಧಾನಸಭಾ ಕ್ಷೇತ್ರ ಇವರ ಹಿರಿಯ ಪುತ್ರರಾದ ಶ್ರೀ ಸಂತೋಷ.ಆರ್. ಜಾರಕಿಹೊಳಿ ಉದ್ಯಮಿಗಳು ಹಾಗೂ ಅಧ್ಯಕ್ಷರು ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ಹಿರೇನಂದಿಇವರ 34 ನೇ ವರ್ಷದ ಹುಟ್ಟುಹಬ್ಬವನ್ನು ಕಾರುಣ್ಯ ಆಶ್ರಮದಲ್ಲಿ ಎಲ್ಲಾ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಬ್ರೆಡ್ ಬಿಸ್ಕಿಟ್ ಹಾಲು ಹಣ್ಣು ಹಂಪಲುಗಳನ್ನು ಬ್ರೆಡ್ ಹಾಲು ಬಿಸ್ಕಿಟ್ ಗಳನ್ನು ವಿತರಿಸಿ ಅನಾಥ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಮೂಲಕ ಕೇಕ್ ಕತ್ತರಿಸಿ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಎಲ್ಲಾ ವೃದ್ಧರು ಹಾಗೂ
ಬುದ್ಧಿಮಾಂದ್ಯರು ಶ್ರೀ ಆದಿಶಕ್ತಿ ದುರ್ಗಾದೇವಿ ಸಿಗಂಧೂರು ಶ್ರೀ ಚೌಡೇಶ್ವರಿ ಅಮ್ಮನವರ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಮಹಾಶಿವಯೋಗಿಗಳು ಅವರ ಹಾಗೂ ಸಕಲ ದೇವಾನುದೇವತೆಗಳಲ್ಲಿ ಪ್ರಾರ್ಥನೆ ಮಾಡಿ ನಮ್ಮ ಕಾರುಣ್ಯ ಕುಟುಂಬದ ಯಜಮಾನರಾಗಿರುವ ಸಂತೋಷ. ಆರ್.ಜಾರಕಿಹೊಳಿ ಅವರು ವಿಶ್ವ ಮಟ್ಟದಲ್ಲಿ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನ ಗಳಿಸಿ ಸಮಾಜದಲ್ಲಿನ ನಮ್ಮಂತಹ ಅನೇಕ ಹಲವಾರು ನೊಂದು ಬೆಂದ ಜೀವಿಗಳಿಗೆ ಆಶ್ರಯ ನೀಡಿ ಅನ್ನದಾತರಾಗುವಂತಹ ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸಿರಿ ಎಂದು ಬೇಡಿಕೊಂಡು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಶರಣು.ಪಾ.ಹಿರೇಮಠ ಗೌರವಾಧ್ಯಕ್ಷರು ಕಾರುಣ್ಯಾಶ್ರಮ ಸಿಂಧನೂರು ಇಂದು ಜಾರಕಿಹೊಳಿಯವರ ಪುತ್ರರಾದ ಸಂತೋಷ.ಆರ್. ಜಾರಕಿಹೊಳಿಯವರ ಹುಟ್ಟುಹಬ್ಬದ ನಿಮಿತ್ಯ ಆಶ್ರಮದಲ್ಲಿ ಇಂತಹ ಅನಾಥಪರ ಸಮಾಜಪರ ಕಾರ್ಯಗಳನ್ನು ಮಾಡುವುದರ ಮೂಲಕ ಈ ರೀತಿ ನಮ್ಮಂತಹ ನೊಂದು ಬೆಂದ ಜೀವಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಒಂದು ಮಹಾನ್ ಕಾರ್ಯ ಈ ಮೂಲಕ ನಾವು ಜಾರಕಿಹೊಳಿಯವರಿಗೆ ಆಶ್ರಮಕ್ಕೆ ಸರಕಾರಿ ನಿವೇಶನದ ಕೋರಿಕೆಯ ವಿನಂತಿಯನ್ನು ಮಾಡಿಕೊಳ್ಳುತ್ತಾ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿ ಜಾರಕಿಹೊಳೆ ಕುಟುಂಬಕ್ಕೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದೇವೆ ಎಂದು ಮಾತನಾಡಿದರು.ಅಯ್ಯಪ್ಪ.ಎಸ್.ಗೌಡನಬಾವಿ ಅಮರೇಶ ಬದನೆಹಾಳು ಭಜನೆ ಹಾಡು ಆಶ್ರಮದ ಮೇಲ್ವಿಚಾರಕರಾದ ಶ್ರೀ ಮತಿ ಸುಜಾತ ಚನ್ನಬಸವ ಸ್ವಾಮಿ ಹಿರೇಮಠ ಇವರುಗಳು ಉಪಸ್ಥಿತರಿದ್ದರು. ನಂತರ ಕಾರಣ ಆಶ್ರಮದ ವತಿಯಿಂದ ಸಂತೋಷ. ಆರ್.ಜಾರಕಿಹೊಳಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿ ಅವರ ಕುಟುಂಬಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು