ಮಂಡ್ಯ: ಆಕೆಗೆ ಡಾಕ್ಟರ್ (Doctor) ಆಗಬೇಕು ಅನ್ನೋ ಬೆಟ್ಟದಷ್ಟು ಆಸೆ. ನಲ್ಲೂ ಕೂಡ ಆಕೆಯೆ ಮುಂದು. ಆಕೆ ದ್ವಿತೀಯ ಪಿಯುಸಿಯಲ್ಲಿ (Second PUC) 600ಕ್ಕೆ 599 ಅಂಕ ಪಡೆದ ಪ್ರತಿಭಾನ್ವಿತೆ. ಆದ್ರೆ ಅವಳಪ್ಪನಿಗೆ ಎರಡೂ ಕಿಡ್ನಿ ವೈಫಲ್ಯ (Kidney Failure) ಆದ ಪರಿಣಾಮ ಆಕೆಯ ಕನಸು ಕಮರಿ ಹೋದಂತಾಗಿದೆ. ಆರ್ಥಿಕ ಸಂಕಷ್ಟದಿಂದ ಆ ಯುವತಿಯ ವಿದ್ಯಾಭ್ಯಾಸ ಅಂತ್ಯಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಹೌದು, ಮಂಡ್ಯದ ಬಿ ಹೊಸಹಳ್ಳಿ ಗ್ರಾಮದ ಕಾಳೇಗೌಡ ಮತ್ತು ಪುಟ್ಟತಾಯಮ್ಮ ದಂಪತಿಯ ಪುತ್ರಿ ಚೈತ್ರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದುಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಎಂದು ಅನಿಸಿಕೊಂಡಿದ್ದಾಳೆ. ಚೈತ್ರಾಗೆ ಚಿಕ್ಕಂದಿನಿಂದಲೂ ಡಾಕ್ಟರ್ ಆಗಬೇಕೆಂಬ ಬೆಟ್ಟದಷ್ಟು ಆಸೆ. ಹಿಗಾಗಿ ಚೈತ್ರ ಡಾಕ್ಟರ್ ಆಗಲೇಬೇಕು ಅಂತ ಹಗಲು ರಾತ್ರಿ ಚೆನ್ನಾಗಿ ಎಸ್‌ಎಸ್‌ಎಲ್‌ಸಿ ಅಲ್ಲಿ 94 ಪರ್ಸೆಂಟ್ ಹಾಗೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 599 ಅಂಕ ಪಡೆದುಕೊಂಡಿದ್ದಾಳೆ. ಈ ಮೂಲಕ ಬಿ ಹೊಸಹಳ್ಳಿ ಹಾಗೂ ಮಂಡ್ಯ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಆದರೆ ಇಷ್ಟೆಲ್ಲಾ ಅಂಕ ಪಡೆದ ಚೈತ್ರಗೆ ಈಗ ವಿದ್ಯಾಭ್ಯಾಸ ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗಿದೆ. ಕಾರಣ ಆಕೆಯ ತಂದೆ ಕಾಳೇಗೌಡರಿಗೆ ಎರಡೂ ಕಡ್ನಿ ವೈಫಲ್ಯವಾಗಿ ಹಾಸಿಗೆ ಹಿಡಿದಿದ್ದಾರೆ.
ಹಾಸಿಗೆ ಹಿಡಿದ ತಂದೆ
ಚೈತ್ರ ತಂದೆ ಕಾಳೇಗೌಡರಿಗೆ ಎರಡೂ ಕಿಡ್ನಿ ವೈಫಲ್ಯವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಕಾಳೇಗೌಡರು ಚಿಕ್ಕವರಿದ್ದಾಗಲೆ ಒಂದು ಕಿಡ್ನಿ ಕೈ ಕೊಟ್ಟಿತ್ತು. ಈಗ ಇದ್ದ ಮತ್ತೊಂದು ಕಿಡ್ನಿ ಕೂಡ ಕೆಲಸ ನಿಲ್ಲಿಸಿದೆ. ಹಿಗಾಗಿ ಕಾಳೇಗೌಡರು ಹಾಸಿಗೆ ಹಿಡಿದಿದ್ದಾರೆ. ಇಷ್ಟು ದಿನ ಗ್ರಾಮದಲ್ಲಿ ಒಂದು ಚಿಕ್ಕ ಮೆಡಿಕಲ್ ಶಾಪ್ ಇಟ್ಟುಕೊಂಡು ಹೇಗೋ ಜೀವನ ನಡೆಸ್ತಿದ್ದ ಕಾಳೇಗೌಡರು, ಈಗ ಆರೋಗ್ಯ ಸಮಸ್ಯೆಯಿಂದ ಅದನ್ನ ಕೂಡ ನಡೆಸಲು ಸಾಧ್ಯವಾಗದಂತಾಗಿದೆ. ಒಂದು ಕಡೆ ಕಾಳೇಗೌಡರಿಗೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕು. ಇದಕ್ಕೆ ಸಾವಿರಾರು ರೂ ಹಣವನ್ನ ವ್ಯಯಿಸಬೇಕಾಗಿದ್ರೆ. ಮತ್ತೊಂದು ಕಡೆ ಚೈತ್ರ ವಿದ್ಯಾಭ್ಯಾಸಕ್ಕೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.
ಇದನ್ನು : ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆರೋಪ; ಕಟೀಲ್ ಒಬ್ಬ ಹುಚ್ಚ ಎಂದ Randeep Surjewala
ಚೈತ್ರಾ ವಿದ್ಯಾಭ್ಯಾಸಕ್ಕೆ ಬೇಕಿದೆ ಆರ್ಥಿಕ ನೆರವು
ಸದ್ಯ ಈ ಕುಟುಂಬದ ಪರಿಸ್ಥಿತಿ ಕಂಡು ಗ್ರಾಮದ ಕೆಲವರು ಆರ್ಥಿಕ ಸಹಾಯ ಮಾಡೋದ್ರ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ ಇಂದಿನ ದಿನದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ವೈದ್ಯರಾಗಬೇಕು ಅಂದ್ರೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಾಗುತ್ತೆ. ಹಿಗಾಗಿ ಚೈತ್ರ ತಾನು ವೈದ್ಯೆಯಾಗಲು ಯಾರಾದರೂ ಸಹಾಯ ಮಾಡಿ ಅಂತ ಕಣ್ಣೀರು ಹಾಕಿದ್ದಾಳೆ. ಸದ್ಯ ಯಾರಾದರೂ ಈಕೆಗೆ ಸಹಾಯ ಮಾಡಿದರೆ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲಗೊಳಿಸಿದಂತೆ ಆಗುತ್ತದೆ.