ಬೆಂಗಳೂರು: ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅವಿವೇಕಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮೊದಲು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ನಳೀನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ತಲೆ ಕೆಟ್ಟಿದೆ. ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರ ಮನಸ್ಸು ಎಷ್ಟು ಕೊಳಕಾಗಿದೆ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ. ಅವಿವೇಕಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಟೀಲು, ಯತ್ನಾಳ್, ಸಿ.ಟಿ.ರವಿ, ಹೆಗಡೆ ಇವರೆಲ್ಲ ಬಿಜೆಪಿ ಹೀರೋಗಳು. ಇವರು ಆಡುವ ಮಾತು, ಬಳಸುವ ಭಾಷೆ ಎಂಥಾದ್ದು ಎಂಬುದು ಜಗಜ್ಜಾಹೀರಾಗುತ್ತಿದೆ. ಇಂಥವರನ್ನೆಲ್ಲ ಬೆಂಬಲಿಸುವವರೇ ನರೇಂದ್ರ ಮೋದಿಯಂಥವರು. ನಳೀನ್ ಕಟೀಲ್ ಅವರಿಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಮೊದಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಬಾಯಿ ಮುಚ್ಚಿಕೊಂಡು ಇರಪ್ಪ ಎಂದು ಬಿಜೆಪಿಯವರು ಹೇಳಲಿ ಎಂದು ಆಗ್ರಹಿಸಿದರು.
Laxmi News 24×7