Breaking News

ಹಿಂದೂ ದೇಗುಲ ಕಟ್ಟಿಸಿ ಭಾವೈಕ್ಯತೆ ಮಂತ್ರ ಸಾರಿದ ಮುಸ್ಲಿಂ ವ್ಯಕ್ತಿ

Spread the love

ರಾಮನಗರ: ಕರ್ನಾಟಕ ಅಂದ್ರೆನೇ ಭಾವೈಕತೆಯ ತವರೂರು. ಹಿಂದೂ-ಮುಸ್ಲಿಂ ಬಾಂಧವರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಅದೇ ರೀತಿ ನಗರದ ಮುಸ್ಲಿಂ ಮುಖಂಡರೊಬ್ಬರು ಹಿಂದೂ ದೇಗುಲ ನಿರ್ಮಿಸಿ ಭಾವೈಕ್ಯತೆ ಮಂತ್ರ ಸಾರಿದ್ದಾರೆ.

 

 

ಚನ್ನಪಟ್ಟಣ ಕ್ಷೇತ್ರದ ಸೈಯದ್ ಸಾದತ್ ಉಲ್ಲಾ ಸಕಾಫ್ ಎಂಬುವವರು ಹಿಂದೂ ದೇವಾಲಯಗಳನ್ನು ಕಟ್ಟಿಸಿ ಭಾವೈಕ್ಯತೆ ಸಾರಿದ್ದಾರೆ. ಲಾಕ್​ ಡೌನ್​ ಸಮಯದಲ್ಲೂ ಫುಡ್​ ಕಿಟ್ ವಿತರಿಸುವ ಮೂಲಕ ನೆರವಾಗಿದ್ದ ಸಕಾಫ್​, ಇದೀಗ ತಮ್ಮ ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ.

 

 

ದೇವಾಲಯದ ಕಾಂಪೌಡ್​ನಲ್ಲೇ ಮಸೀದಿಯನ್ನು ಕೂಡ ನಿರ್ಮಿಸಿ ಎರಡು ಧರ್ಮಗಳ ನಡುವೆ ಸೌಹಾರ್ದತೆ ಬೆಳೆಸಲು ಶ್ರಮಿಸುತ್ತಿದ್ದಾರೆ ಸಕಾಫ್​. ಇನ್ನು ಸಕಾಫ್​ ಅವರ ಈ ಕಾರ್ಯಕ್ಕೆ ನಗರದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಜಾತಿ-ಧರ್ಮಗಳ ಕಿತ್ತಾಟದ ಈ ಹೊತ್ತಲ್ಲಿ ಈ ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ