Breaking News

ಇಂದು ರಿಲೀಸ್ ಆಗಲೇ ಇಲ್ಲ ಕೋಟಿಗೊಬ್ಬ : ಸುದೀಪ್ ಸರ್ ಗೆ ಸತ್ಯ ಗೊತ್ತಿದೆ ಎಂದ ಸೂರಪ್ಪ ಬಾಬು

Spread the love

ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗದ ಕಾರಣ ಅಭಿಮಾನಿಗಳಲ್ಲಿ ನಟ ಕಿಚ್ಚಾ ಸುದೀಪ್ ಕ್ಷಮೆ ಕೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿರುವ ಸುದೀಪ್, ಈಗಾಗಲೇ ಥಿಯೇಟರ್​ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ.. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ ಎಂದಿದ್ದಾರೆ.

 

 

 

ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ಸುದೀಪ್

ಸದ್ಯ ಚಿತ್ರಮಂದಿರಗಳ ಬಳಿ ಬಂದಿರುವ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ.. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ. ಕೆಲವರ ಬೇಜವಾಬ್ದಾರಿಯಿಂದ ಈ ರೀತಿ ಆಗಿದೆ. ಸಿನಿಮಾ ಮತ್ತೆ ಯಾವಾಗ ಪ್ರದರ್ಶನ ಆಗುತ್ತೆ ಅನ್ನೋದನ್ನ ಮತ್ತೆ ನಾನು ನಿಮಗೆ ತಿಳಿಸುತ್ತೇನೆ.

ಹೊಸ ಸಮಯ ತಿಳಿಸುವುದು ನನ್ನ ಕರ್ತವ್ಯ ಅಲ್ಲಿಯವೆಗೂ ನೀವೆಲ್ಲ ತಾಳ್ಮೆಯಿಂದ ಇರಿ. ಸಿನಿಮಾ ರಿಲೀಸ್ ಆಗಿಲ್ಲ ಅಂತ ಥಿಯೇಟರ್ ಗಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಮಾತನಾಡುವ ಹಾಗೆ ಇವತ್ತಿನ ಎಲ್ಲಾ ಶೋಗಳನ್ನು ರದ್ದು ಮಾಡಲಾಗಿದೆ. ನಾಳೆ ಎಂದಿನಂತೆ ಸಿನಿಮಾ ರಿಲೀಸ್ ಆಗುತ್ತದೆ ಎಂದಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಿನಿಮಾ ನಿರ್ಮಾಪದ ಸೂರಪ್ಪ ಬಾಬು ಸಿನಿಮಾ ತಡವಾಗಿ ರಿಲೀಸ್ ಆಗಿರುವ ಹಿಂದೆ ನನ್ನ ತಪ್ಪಿಲ್ಲ. ಸುದೀಪ್ ಸರ್ ಗೆ ಎಲ್ಲಾ ಸತ್ಯ ಗೊತ್ತಿದೆ ಎಂದಿದ್ದಾರೆ.


Spread the love

About Laxminews 24x7

Check Also

ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.

Spread the love ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ