Breaking News

ವಿದ್ಯುತ್ ರಿಪೇರಿ ವೇಳೆ ಶಾಕ್ ತಗುಲಿ ಲೈನ್​ಮ್ಯಾನ್​ ಸಾವು;

Spread the love

ಬಾಗಲಕೋಟೆ: ವಿದ್ಯುತ್​​ ಶಾಕ್​​ ತಗುಲಿ ವಿದ್ಯುತ್​ ಕಂಬದಲ್ಲೇ ಹೆಸ್ಕಾಂ ಗುತ್ತಿಗೆದಾರನ ಅಡಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಬಳಿ ನಡೆದಿದೆ.

ಬದಾಮಿ ತಾಲೂಕಿನ ಬಿ.ಎನ್ ಜಾಲಿಹಾಳ ಗ್ರಾಮದ ನಿವಾಸಿ ಹನುಮಂತ ಮುಕಾಶಿ (33) ಮೃತ ಕಾರ್ಮಿಕ. ಹೆಸ್ಕಾಂ ಗುತ್ತಿಗೆದಾರನ ಅಡಿ ಈತ ಕೆಲಸ ಮಾಡುತ್ತಿದ್ದ. ಇಂದು ಟ್ರಾನ್ಸ್​​​ಫರ್ಮ್​​ ಕೂರಿಸಲು ಮುಂದಾಗಿದ್ದ ವೇಳೆ ಅವಘಡ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಕೆಲಸ ಶುರು ಮಾಡಿದ್ದರು ಎನ್ನಲಾಗಿದೆ. ಕೆಲಸ ಆರಂಭ ಮಾಡಲು ಲೈನ್ ಕ್ಲಿಯರ್ ಇಲ್ಲದೆ ನೌಕರನನ್ನು ಕಂಬ ಏರಿಸಿ ಗುತ್ತಿಗೆದಾರ ಯಡವಟ್ಟು ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.

Spread the love ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ