ದಾವಣಗೆರೆ: ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ತಮ್ಮ ಕ್ಷೇತ್ರದಲ್ಲಿ ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೀಡಾದವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ. ಇದೀಗ ಮತ್ತ್ತೊಮ್ಮೆ ಬಡ ವಿದ್ಯಾರ್ಥಿನಿಯರಿಗೆ ಮೊಬೈಲ್ ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ಜನೋಪಕಾರಿ ಕೆಲಸಗಳಿಗೆ ತಾನು ಎಂದೆಂದಿಗೂ ಸಿದ್ಧ ಎನ್ನುವ ರೇಣುಕಾಚಾರ್ಯರು ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಟಿ. ಗೋಪಗೊಂಡನಹಳ್ಳಿಯ ಬಿಂದು ಮತ್ತು ಸುಂಕದಕಟ್ಟೆ ಗ್ರಾಮದ ನರ್ಮದಾ ಎಂಬಿಬ್ಬರು ವಿದ್ಯಾರ್ಥಿಗಳು ಮೊಬೈಲ್ ಇಲ್ಲದೆ ಪರದಾಡುತ್ತಿದ್ದರು. ಇದರಿಂದ ಆನ್ ಲೈನ್ ಕ್ಲಾಸ್ ಗೆ ತೊಂದರೆಯಾಗುತ್ತಿತ್ತು. ಹೀಗಾಗಿ ರೇಣುಕಾಚಾರ್ಯ ಅವರು ಈ ಹಿಂದೆ ಆ ವಿಧ್ಯಾರ್ಥಿನಿಯರಿಗೆ ಭರವಸೆ ನೀಡಿದ್ದರು. ಅದರಂತೆ ಇದೀಗ ಅವರಿಗೆ ಸ್ಮಾರ್ಟ್ ಫೋನ್ ಕೊಡಿಸಿ ನೆರವಾಗಿದ್ದಾರೆ.
ಇನ್ನು, ವಿದ್ಯಾರ್ಥಿನಿಯರು ತಮ್ಮ ಕ್ಷೇತ್ರದ ಶಾಸಕರ ಬಗ್ಗೆ ಹೆಮ್ಮೆ ಪಟ್ಟುಕೊಂಡು ಶಾಸಕ ರೇಣುಕಾಚಾರ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.