ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಬಿಕ್ಕಟ್ಟು ಉದ್ಭವಿಸಲು ಕಾರಣಗಳೇನು ಎಂಬ ಬಗ್ಗೆ ವಿದ್ಯುತ್ ಸಚಿವಾಲಯದಿಂದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.
ಆರ್ಥಿಕತೆಯ ಚೇತರಿಕೆಯಿಂದಾಗಿ ವಿಪರೀತ ಹೆಚ್ಚಾದ ವಿದ್ಯುತ್ ಬೇಡಿಕೆ, ಸೆಪ್ಟೆಂಬರ್ ತಿಂಗಳಿನಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಆಮದು ಮಾಡಿಕೊಂಡ ಕಲ್ಲಿದ್ದಲು ಬೆಲೆಯಲ್ಲಿನ ಹೆಚ್ಚಳವು ಸಹ ದೇಶೀಯ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಲು ಇವೆಲ್ಲ ಕಾರಣಗಳು ಎಂದು ವಿದ್ಯುತ್ ಸಚಿವಾಲಯ ಶನಿವಾರ ತಿಳಿಸಿದೆ. ವಿದ್ಯುತ್ ಸಚಿವಾಲಯವು ತಿಳಿಸಿರುವಂತೆ, ದೈನಂದಿನ ವಿದ್ಯುತ್ ಬಳಕೆಯು 4 ಬಿಲಿಯನ್ ಯೂನಿಟ್ ಮೀರಿದೆ ಮತ್ತು ಶೇ 65ರಿಂದ 70ರಷ್ಟು ಬೇಡಿಕೆಯನ್ನು ಕಲ್ಲಿದ್ದಲು ಬಳಸಿದ ವಿದ್ಯುತ್ ಉತ್ಪಾದನೆಯಿಂದ ಪೂರೈಸಲಾಗುತ್ತಿದೆ ಎನ್ನಲಾಗಿದೆ. ವಿದ್ಯುತ್ ಸಚಿವಾಲಯವು ಸ್ಥಾಪಿಸಿದ ಕೋರ್ ಮ್ಯಾನೇಜ್‌ಮೆಂಟ್ ಟೀಮ್ (ಸಿಎಂಟಿ) ಪ್ರತಿದಿನವೂ ಕಲ್ಲಿದ್ದಲು ದಾಸ್ತಾನುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ. ಹಾಗೂ ಕೋಲ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಮುಂದಿನ ಕ್ರಮಗಳನ್ನು ಖಾತ್ರಿಪಡಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.