Breaking News

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಚಪ್ಪಲಿ ಬಿಡೋ ಜಾಗದಲ್ಲಿ ಬಿಡೋಣವೆಂದ ಕೆ.ಎಸ್​. ಈಶ್ವರಪ್ಪ..!

Spread the love

ಬಾಗಲಕೋಟೆ: ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಗ್ರಾಮದ ಅಭಿವೃದ್ದಿ ಕಡೆಗೆ ಗಮನ ಹರಿಸೋಣ ಎಂದು ಸಲಹೆ ನೀಡುವ ವೇಳೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬಿಡೋಣ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಿನ್ನೆ (ಅ.8) ಬಾಗಲಕೋಟೆ ನವನಗರದ ಕಲಾಭವನದಲ್ಲಿ ನಡೆದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒಗಳ ಕಾರ್ಯಾಗಾರದಲ್ಲಿ ಈಶ್ವರಪ್ಪ ಹೇಳಿಕೆ ನೀಡಿದರು.

ನಾವುಗಳು ಗ್ರಾಮದ ಅಭಿವೃದ್ದಿ ಮಾಡುವವರು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಷ್ಟುನೂ ನಾವು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬಿಡೋಣ ಅಂದರು. ಗ್ರಾಮದಲ್ಲಿನ ಕೆರೆ ಅಭಿವೃದ್ದಿಪಡಿಸಿ ಉದ್ಘಾಟನೆಗೆ ನಾನೇ ಬರ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಿಡಿಒಗಳಿಗೆ ಖಡಕ್ ಎಚ್ಚರಿಕೆ ನೀಡಿದ ಈಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಫಾಧ್ಯಕ್ಷರ ಬಗ್ಗೆ ತಾತ್ಸಾರ ಮಾಡಿದ್ರೆ, ಖಂಡಿತ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದರು. ಈ ವೇಳೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚಪ್ಪಾಳೆ ಹೊಡೆದು ಕೇಕೆ ಹಾಕಿದರು.

ಕೇಕೆ ಹೊಡೀತರಲ್ಲ ನಿಮಗೆ ನಾಚಿಕೆ ಆಗಬೇಕು. ಕೇಕೆ ಹೊಡಿತೀರಿ ಅಂದ್ರೆ ಪಿಡಿಒಗಳು ನಿಮ್ಮ ಮಾತು ಕೇಳಲ್ಲ ಅಂದಂಗಾಯಿತಲ್ಲ. ನಾನು ಎಲ್ಲ ಪಿಡಿಒಗಳಿಗೆ ಈ ಮಾತು ಹೇಳ್ತಿಲ್ಲ. ಅನೇಕರು ಒಳ್ಳೆಯ ಕೆಲಸ ಮಾಡ್ತಾರೆ. ಅವರಿಗೆ ಅಭಿನಂದಿಸುವೆ. ಇನ್ನು ಕೆಲವ ಪಿಡಿಒಗಳು ಹಳ್ಳಿಗೂ ಬರಲ್ಲ, ಆಫೀಸ್​ಗೂ ಬರಲ್ಲ. ಬಾಗಲಕೋಟೆಯ ಯಾವುದೋ ಲಾಡ್ಜ್ ನಲ್ಲಿ ಇರ್ತಾರೆ ಎಂದು ಕಿಡಿಕಾರಿದರು.

ಪಿಡಿಒಗಳ ಕಡೆ ಎರಡು ಮೊಬೈಲ್ ಇರ್ತಾವೆ. ತಮಗೆ ಯಾರು ಬೇಕೋ ಅವರಿಗೆ ಮಾತ್ರ ಒಂದು ನಂಬರ್ ಕೊಟ್ಟಿರುತ್ತಾರೆ. ಇನ್ನೊಂದು ನಂಬರ್ ಲೆಕ್ಕಕ್ಕೆ ಇರಲ್ಲ. ಇನ್ನು ಆರು ತಿಂಗಳು ಬಿಟ್ಟು ಮತ್ತೆ ಬಾಗಲಕೋಟೆಗೆ ಬರುತ್ತೇನೆ. ಆಗ ನಿಮ್ಮ ಮೇಲೆ ಕಂಪ್ಲೆಂಟ್ ಬಂದ್ರೆ, ನಾನು ವರ್ಗಾವಣೆ ಅಥವಾ ಅಮಾನತು ಮಾಡಲ್ಲ, ನೇರವಾಗಿ ಕೆಲಸದಿಂದಲೇ ವಜಾ ಮಾಡುತ್ತೇವೆ ಎಂದು ಪಿಡಿಒಗಳಿಗೆ ಸಚಿವರು ಎಚ್ಚರಿಕೆ ನೀಡಿದರು


Spread the love

About Laxminews 24x7

Check Also

ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ

Spread the love ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ ಉಗರಗೋಳ, ಚಿಕ್ಕುಂಬಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸವದತ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ