Breaking News

ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧದ ನೌಕರರಿಂದಲೂ ಡೀಲ್ : ಕಾಂಗ್ರೆಸ್

Spread the love

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ,

ಭ್ರಷ್ಟಜನತಾಪಾರ್ಟಿ ಎಂಬ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲಾದ ಐಟಿ ದಾಳಿಯೇ ಎಲ್ಲವನ್ನೂ ಹೇಳುತ್ತಿದೆ. ಸಾರಿಗೆ ನೌಕರನಾಗಿದ್ದವನು ಯಡಿಯೂರಪ್ಪ ಸಹಾಯಕನಾದ ಮಾತ್ರಕ್ಕೆ 2000 ಕೋಟಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್‌ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಕೋಟಿ ಒಡೆಯನಾಗಿರಬಹುದು ಬಿಜೆಪಿ? ಬಿಜೆಪಿಗೆ ಭ್ರಷ್ಟಾಚಾರವೇ ಮನೆದೇವ್ರು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಸಚಿವರಾದ ಅಶೋಕ್ ಹಾಗೂ ಶ್ರೀರಾಮುಲು ಸಹಾಯಕರು ವಸೂಲಿ, ಡೀಲ್‌ಗಳಲ್ಲಿ ತೊಡಗುತ್ತಾರೆ. ಬಿ ಎಸ್ ಯಡಿಯೂರಪ್ಪ ಸಹಾಯಕ 2000 ಕೋಟಿ ದೋಚುತ್ತಾನೆ. ಸಣ್ಣವರ ಲೂಟಿ ಇಷ್ಟಿರುವಾಗ ದೊಡ್ಡವರ ದರೋಡೆ ಎಸ್ಟಿರಬಹುದು ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.

‘@BJP4Karnataka ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ.@RAshokaBJP ಹಾಗೂ @sriramulubjp ಸಹಾಯಕರು ವಸೂಲಿ, ಡೀಲ್‌ಗಳಲ್ಲಿ ತೊಡಗುತ್ತಾರೆ.@BSYBJP ಸಹಾಯಕ 2000 ಕೋಟಿ ದೋಚುತ್ತಾನೆ.

ಸಣ್ಣವರ ಲೂಟಿ ಇಷ್ಟಿರುವಾಗ ದೊಡ್ಡವರ ದರೋಡೆ ಎಸ್ಟಿರಬಹುದು?#ಭ್ರಷ್ಟಜನತಾಪಾರ್ಟಿ


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ