ಬೆಂಗಳೂರು: ಇನ್ಮುಂದೆ ಬೆಂಗಳೂರು ರೈಲ್ವೆ ಸ್ಟೇಷನ್ಗೆ ಹೋಗಬೇಕಾದ್ರೆ ಎಚ್ಚರವಾಗಿರಬೇಕು. ಆದ್ರೆ ಪ್ರಯಾಣಿಕರಲ್ಲ. ಖತರ್ನಾಕ್ ಆಟ ಆಡೋ ರೌಡಿಗಳು, ಕಳ್ಳರು. ಹೌದು.. ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇನ್ಮುಂದೆ ಚಾಲಾಕಿಗಳ ಆಟಕಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳು ದಟ್ಟವಾಗಿವೆ ಅದಕ್ಕೆ ಕಾರಣ ಏನು ಗೊತ್ತಾ?

ರೈಲ್ವೆ ನಿಲ್ದಾಣದಲ್ಲಿ ಯಾವುದಾದ್ರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಎಸ್ಕೇಪ್ ಆಗ್ತೀನಿ ಅಂದ್ರೆ ಇನ್ಮುಂದೆ ಚಾನ್ಸೇ ಇಲ್ಲ. ರೈಲ್ವೆ ರಕ್ಷಣಾ ದಳ (Railway protection Force) ನಿಲ್ದಾಣದಲ್ಲಿ ಬರೋಬ್ಬರಿ 157 ಸಿಸಿಟಿವಿ ಅಳವಡಿಸಿದೆ. ಇದು ಕ್ಯಾಮರಾ ಮಾತ್ರವಲ್ಲ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅಸ್ತ್ರ ಎಂದೇ ಹೇಳಬಹುದು.

ಈ ಕ್ಯಾಮರಾದ ಹೆಸರು ಫೇಸ್ ರೆಕಗ್ನಿಷನ್ (Face Recognisation Spot)ಯಾವುದೇ ಕಳ್ಳ ಓಡಾಡಿದ್ರೂ ಒಂದು ಸಣ್ಣ ಚಹರೆಯಿಂದ ಆತನ ಗುರುತು ಹಿಡಿಯುತ್ತಂತೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡ್ರೂ ಈ ಸಿಸಿಟಿವಿಯಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಅಷ್ಟು ಸೂಕ್ಷ್ಮವಾಗಿ ಈ ಕಾಮೆರಾ ವರ್ಕ್ ಮಾಡುತ್ತೆ. ಈಗಾಗಲೇ ಈ ಸಿಸಿಟಿವಿಯಿಂದ ಹಲವು ಆರೋಪಿಗಳ ಪತ್ತೆ ಮಾಡಲಾಗಿದೆ. ಸುಮಾರು 2.4 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಈ ಕ್ಯಾಮರಾ ದಿಂದ ಬೆಂಗಳೂರು ಕ್ರೈಂ ಪೊಲೀಸರಿಗೂ ಸಹಕಾರಿಯಾಗಲಿದೆ ಎನ್ನಲಾಗ್ತಿದ್ದು ಈ ಸಿಸಿಟಿವಿಯಲ್ಲಿ 100ಕ್ಕೂ ಹೆಚ್ಚು ಆರೋಪಿಗಳ ಮಾಹಿತಿಯನ್ನು ಈಗಾಗಲೇ ಎಂಟ್ರಿ ಮಾಡಲಾಗಿದೆಯಂತೆ. ಈ ಆರೋಪಿಗಳು ರೈಲ್ವೆ ನಿಲ್ದಾಣದಲ್ಲಿ ಕಂಡ ತಕ್ಷಣ ಕಮಾಂಡರ್ ಸೆಂಟರ್ ಗೆ ಮಾಹಿತಿ ರವಾನೆಯಾಗುತ್ತಂತೆ.