Breaking News

ಮಾಂಜ್ರಾ ನದಿ: 60 ಅಡಿ ಮೇಲಿಂದ ಧುಮುಕಿ ಯುವಕನ ಹುಚ್ಚಾಟ

Spread the love

ಬೀದರ್​: ಮಹಾರಾಷ್ಟ್ರದಿಂದ ಭಾರೀ ನೀರು ಬಿಟ್ಟ ಕಾರಣ ಮಾಂಜ್ರಾ ನದಿ ಮೈದುಂಬಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಉಕ್ಕಿ ಹರಿಯುತ್ತಿರುವ ಈ ನದಿಯಲ್ಲಿ ಯುವಕರು ಜೀವವನ್ನು ಲೆಕ್ಕಿಸದೇ ದುಸ್ಸಾಹಸಕ್ಕೆ ಮುಂದಾಗುತ್ತಿದ್ದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಭರದಲ್ಲಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆ ಮತ್ತು ನೆರೆಯ ರಾಜ್ಯದಿಂದ ನೀರಿ ಬಿಟ್ಟ ಕಾರಣ ಮಾಂಜ್ರಾ ನದಿ ತುಂಬಿ ತುಳುಕುತ್ತಿದೆ. ಕಳೆದ ತಿಂಗಳು ಈ ನದಿಯಲ್ಲಿ ದುಸ್ಸಾಹಸಕ್ಕೆ ಮುಂದಾಗಿದ್ದ ವ್ಯಕ್ತಿಯೋರ್ವ ನದಿಪಾಲಾಗಿದ್ದ. ಆ ಘಟನೆ ಮಾಸುವ ಮುನ್ನವೇ ಮತ್ತೆ ಯುವಕರು ನದಿ ಪಾತ್ರಕ್ಕೆ ದಾಂಗುಡಿ ಇಟ್ಟು ಪ್ರಾಣ ಭಯ ಮರೆತು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ನದಿಯಲ್ಲಿ ಯುವಕನೋರ್ವ ಹುಚ್ಚಾಟ ನಡೆಸಿದ್ದು ಸುಮಾರು 50-60 ಅಡಿ ಮೇಲಿಂದ ನದಿಗೆ ಹಾರಿ ಈಜುವ ಸಾಹಸಕ್ಕೆ ಮುಂದಾಗಿದ್ದಾನೆ. ಕೌಠಾ ಸೇತುವೆ ಮೇಲಿಂದ ನದಿಗೆ ಈಜಾಡಲು ಯುವಕ ಜಿಗಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ