ಗೋಕಾಕ್ ಫಾಲ್ಸ್ ನಲ್ಲಿ ಮಧ್ಯರಾತ್ರಿ ಅಚ್ಚರಿಯ ಘಟನೆ ನಡೆದಿದೆ. 140_ಅಡಿ ಆಳಕ್ಕೆ ಬಿದ್ದ ಯುವಕನೊಬ್ಬ ಬದುಕುಳಿದಿದ್ದು ಅಗ್ನಿ ಶಾಮಕ ದಳದ ಸಿಬ್ಬಂಧಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.
https://youtu.be/GAPJHEFf7mM
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಈ ಯುವಕ ಸೆಲ್ಫೀ ತೆಗೆಯಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಜಾರಿ ಬಿದ್ದಿದ್ದ,ರಾತ್ರಿಹೊತ್ತು ಅಗ್ನಿ ಶಾಮಕದಳದ ಸಿಬ್ಬಂಧಿ ಮತ್ತು ಪೋಲೀಸರು ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರೂ ಯುವಕ ಪತ್ತೆ ಆಗಿರಲಿಲ್ಲ, ಮದ್ಯರಾತ್ರಿ 3 ಗಂಟೆಗೆ ಈ ಯುವಕ ಪೋಲೀಸರಿಗೆ ಫೋನ್ ಮಾಡಿ ನಾನು ಕಲ್ಲಿನ ಪೊದರಿನಲ್ಲಿ ಇದ್ದೇನೆ ನನ್ನನ್ನು ರಕ್ಷಿಸಿ ಎಂದು ಅಂಗಲಾಚಿದ್ದ ಈ ಯುವಕ ಕೊನೆಗೂ ಬದುಕುಳಿದಿದ್ದು ಪವಾಡವೇ ಸರಿ…
ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ ಬಿದ್ದರೂ ಬದುಕಿದ ಯುವಕ,ಸ್ನೇಹಿತರೊಂದಿಗೆ ಗೋಕಾಕ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ್ ಸಾಗರ್ ಎಂಬಾತಆಯತಪ್ಪಿ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ ಪ್ರದೀಪ,ಬೆಳಗಾವಿಯ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡ್ತಿದ್ದ ಪ್ರದೀಪ್ ಸಾಗರ್ ಬದುಕುಳಿದ್ದು ಪವಾಡ.
ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು ಗೋಕಾಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Laxmi News 24×7