Breaking News

ಗೋವಾದಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ: ಶಿವಸೇನೆ

Spread the love

ಪಣಜಿ: ಗೋವಾದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 22 ಕ್ಷೇತ್ರಗಳಲ್ಲಿ ಶಿವಸೇನೆಯು ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಫರ್ಧಿಸಲಿದೆ ಎಂದು ಸಂಜಯ್ ರಾವುತ್ ಬುಧವಾರ ಹೇಳಿಕೆ ನೀಡಿದ್ದಾರೆ.

ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಸೇನೆಯ ಪ್ರಭಾರಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವ ರನ್ನು ಗೋವಾ ಶಿವಸೇನೆಯ ಪ್ರಮುಖ ಜಿತೇಶ್ ಕಾಮತ್ ಹಾಗೂ ಸುಭಾಷ ಕೇರಕರ್ ರವರು ಸ್ವಾಗತಿಸಿದರು .

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಂಜಯ್ ರಾವುತ್, ‘ಗೋವಾ ಮತ್ತು ಮಹಾರಾಷ್ಟ್ರಕ್ಕೆ ಒಂದು ಭಾವನಾತ್ಮಕ ಸಂಬಂಧವಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಯಾವ ಪದ್ಧತಿಯಲ್ಲಿ ರಾಜ್ಯಭಾರ ನಡೆಸುತ್ತಿದೆಯೋ ಅದೇ ಪದ್ಧತಿಯಲ್ಲಿ ಗೋವಾದಲ್ಲಿಯೂ ಶಿವಸೇನೆ ರಾಜ್ಯಭಾರ ನಡೆಸಲಿದೆ. ಗೋವಾದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 22 ಕ್ಷೇತ್ರಗಳಲ್ಲಿ ಶಿವಸೇನೆಯು ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆಯೇ ಸ್ವತಂತ್ರವಾಗಿ ಸ್ಫರ್ಧಿಸಲಿದೆ’ ಎಂದರು.

ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರೊಂದಿಗೆ ಬೈಠಕ್ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ