ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್ ಕುಮಾರ್ ಜೊತೆಗೆ ‘ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ ಬಹು ದೂರ ಸಾಗಿ ಬಂದಿದ್ದಾರೆ.
ಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಹೊಂದಿರುವ ಮೌನಿ, ಬಾಲಿವುಡ್‌ಗೆ ಬರಬೇಕಾದರೆ ತಾವೆಂತೆಂಥಾ ತ್ಯಾಗಗಳನ್ನು ಮಾಡಿದ್ದಾರೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ನಟನೆಯ ಕನಸು ಕಾಣುತ್ತಿದ್ದ ಮೌನಿ, ಇದಕ್ಕಾಗಿ ತಮ್ಮ ಕಾಲೇಜು ವ್ಯಾಸಂಗ ತ್ಯಜಿಸಿ ಕನಸಿನ ನಗರಿಗೆ ಕನಸನ್ನು ಅರಸಿ ಬರಬೇಕಾಯಿತು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಸಮೂಹ ಮಾಧ್ಯಮದಲ್ಲಿ ಪದವಿ ಪೂರೈಸುತ್ತಿದ್ದ ಮೌನಿ ಮುಂಬಯಿಗೆ ಹಾರಿ ತಮ್ಮ ಕನಸಿನ ಪಯಣವನ್ನು ಆರಂಭಿಸಿದರು.
ಕೂಡಲೇ ‘ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ’ ಧಾರಾವಾಹಿಯೊಂದಿಗೆ ಕಿರುತೆರೆ ಪ್ರವೇಶ ಮಾಡಿದ ಮೌನಿ ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ ! ಮಂಗಳವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮೌನಿ, ಬರ್ತ್‌ಡೇ ಸೆಲೆಬ್ರೇಷನ್‌ನ ಝಲಕ್ ತೋರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Laxmi News 24×7