Breaking News

ಡಬಲ್ ಬಾರ್ ಬಂದೂಕಿನಿಂದ ಹೊರಬಂದ ಗುಂಡು ಸಮಂಧಿಕನ ಕಾಲಿಗೆ

Spread the love

ಬೆಳಗಾವಿ-ರಾಗಿಯ ರಾಶಿ ಮಾಡಲು ಅಪ್ಪ ಮಕ್ಕಳು ಹೊಲಕ್ಕೆ ಹೋಗಿದ್ರು‌. ಜೊತೆಗೆ ಸಮಂಧಿಕನೊಬ್ಬ ಹೋಗಿದ್ದ ,ಹೊಲದಲ್ಲಿ ಹಂದಿಗಳ ಕಾಟ ಇದೆ ಅಂತಾ ಡಬಲ್ ಬಾರ್ ಬಂದೂಕು ಹೊತ್ಕೊಂಡ ಹೋದ ಅಪ್ಪ ಮಕ್ಕಳು ಎಡವಟ್ಟು ಮಾಡಿಕೊಂಡ ಘಟನೆ ಬೆಳಗಾವಿ ಸಮೀಪದ ರಾಜಕಟ್ಟಿ ಗ್ರಾಮದಲ್ಲಿ ನಡೆದಿದೆ.

ರಾಜಕಟ್ಟಿ ಗ್ರಾಮದ ಅಪ್ಪ ಮಕ್ಕಳು ಹೊಲದಲ್ಲಿ ರಾಗಿ ರಾಶಿ ಮಾಡಲು ಹೋಗಿದ್ದರು‌.ಗದ್ದೆಯಲ್ಲಿ ಕಾಲಿಡುತ್ತಿದ್ದಂತೆಯೇ ಕಾಡು ಹಂದಿ ರಾಗಿ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿದ ಇವರು ಅಲರ್ಟ್ ಆದ್ರು.ಇವರ ಜೊತೆ ಹೋಗಿದ್ದ ಇವರ ಸಮಂಧಿಕ ಹಂದಿಯ ಬೆನ್ನು ಹತ್ತಿದ,ಡಬಲ್ ಬಾರ್ ಬಂದೂಕು ತೆಗೆದ ಅಪ್ಪ ಮಕ್ಕಳು ಹಂದಿ ಫಾಲೋ ಮಾಡಿದ್ರು, ಹಂದಿ ಪಕ್ಕದ ಗದ್ದೆಗೆ ನುಗ್ಗಿ ಅಪ್ಪ ಮಕ್ಜಳು ಮತ್ತು ಇವರ ಸಮಂಧಿಕನನ್ನು ಓಡಾಡಿಸಿತು.

ಗದ್ಸೆಯಲ್ಲಿ ಕಾಡು ಹಂದಿ ಅಲ್ಲಿದೆ,ಇಲ್ಲಿದೆ ಎಂದು ಇವರ ಸಮಂಧಿಕ ಅಪ್ಪ ಮಕ್ಕಳಿಗೆ ಸಿಗ್ನಲ್ ಕೊಡುತ್ತಿದ್ದ, ಮಗ ಡಬಲ್ ಬಾರ್ ಬಂದೂಕು ಹಿಡಿದುಕೊಂಡೇ ಹಂದಿ ಹೊಡೆಯಲು ರೆಡಿಯಾಗಿದ್ದ,ಸಮಂಧಿಕ ಬೆಳೆದು ನಿಂತ ಬೆಳೆಯ ಮದ್ದೆ ನಿಂತು ಹಂದಿ ಇಲ್ಲೇ ಇದೆ ಅಂತಾ ಸಿಗ್ನಲ್ ಕೊಟ್ಟ,ಮಗ ಡಬಲ್ ಬಾರ್ ಬಂದೂಕಿನಿಂದ ಗುಂಡು ಹಾರಿಸುವಷ್ಟರಲ್ಲಿ ಹಂದಿ ಓಡಿ ಹೋಗಿತ್ತು.ಗುಂಡು ಇವರ ಸಮಂಧಿಕನಿಗೆ ತಗಲಿತ್ತು.

ಡಬಲ್ ಬಾರ್ ಬಂದೂಕಿನಿಂದ ಹೊರಬಂದ ಗುಂಡು ಸಮಂಧಿಕನ ಕಾಲಿಗೆ ತಗಲಿತ್ತು,ಗಾಯಗೊಂಡ ಸಮಂಧಿಕನನ್ನು ಅಪ್ಪ ಮಕ್ಕಳು ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಅಪ್ಪ ಮಗನಿಗೆ ಆಪತ್ತು ಕಾದಿತ್ತು,ಯಾಕಂದ್ರೆ ಅಷ್ಟರೊಳಗೆ ಕಾಕತಿ ಪೋಲೀಸರಿಗೆ ಮಾಹಿತಿ ಗೊತ್ತಾಗಿತ್ತು.

ಅಪ್ಪ ಶಿವರಾಯ ಮುಚ್ಚಂಡಿ ಅವರ ಹೆಸರಿನಲ್ಲಿ ಡಬಲ್ ಬಾರ್ ಬಂದೂಕು ಇತ್ತು, ಮಗ ಬಾಳಪ್ಪ ಶಿವರಾಯ ಮುಚ್ಚಂಡಿ ಇದೇ ಬಂದೂಕಿನಿಂದ ಗುಂಡು ಹಾರಿಸಿದ್ದಕ್ಕೆ,ಕಾಕತಿ ಪೋಲೀಸರು ಇವರಿಬ್ಬರ ಮೇಲೆ ಕೇಸ್ ಹಾಕಿ ಅರೆಸ್ಟ ಮಾಡಿದ್ದಾರೆ .ಗುಂಡು ತಗಲಿ ಗಾಯಗೊಂಡ ಇವರ ಸಮಂಧಿಕ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ