Breaking News

ಕುಡುಕುನ ವೇಷ ಧರಿಸಿ ಆರೋಪಿ ಬಂಧಿಸಿದ ಪೊಲೀಸರು.. 9 ವರ್ಷಗಳ ಹಿಂದಿನ ಕೇಸ್​ಗೆ ಕೊನೆಗೂ ಮುಕ್ತಿ

Spread the love

ಬೆಂಗಳೂರು: ಒಂಭತ್ತು ವರ್ಷದ ಹಿಂದಿನ ಪ್ರಕರಣವೊಂದನ್ನ ಪೊಲೀಸರು ಬೇಧಿಸಿದ್ದಾರೆ, ಕುಡುಕನ ಸೋಗಿನಲ್ಲಿ ಹೋಗಿ ಆರೋಪಿಯನ್ನ ಬಂಧಿಸಿದ್ದಾರೆ.

ಟ್ರ್ಯಾಕ್ಟರ್ ಓಡಿಸುತ್ತಿದ್ದ ಆಂಥೋನಿ ಎಂಬಾತ ಆಟೋಗೆ ಡಿಕ್ಕಿಹೊಡೆದು ಪರಾರಿಯಾಗಿದ್ದನಂತೆ. ಘಟನೆಯಲ್ಲಿ 8 ವರ್ಷದ ಕೌಶಲ್ ಕುಮಾರ್​ ಎಂಬಾತ ಮೃತಪಟ್ಟಿದ್ದ. ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಬಾಪೂಜಿನಗರದಲ್ಲಿ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿಗೆ 10 ತಿಂಗಳು 15 ದಿನ ಜೈಲು ಶಿಕ್ಷೆಯಾಗಿತ್ತು. ಆತನಿಗೆ ಶಿಕ್ಷೆ ಪ್ರಕಟ ಆಗ್ತಿದ್ದಂತೆ ಆತ ತಲೆಮೆರೆಸಿಕೊಂಡಿದ್ದ. ಬಳಿಕ ವಿಳಾಸ ಬದಲಿಸಿಕೊಂಡು ರಿಹ್ಯಾಬಿಟೇಷನ್​ ಸೆಂಟರ್​ಗೆ ಸೇರ್ಕೊಂಡಿದ್ದ ಎನ್ನಲಾಗಿದೆ.

ಆರೋಪಿಗಾಗಿ ಹುಡುಕಿ ಹುಡುಕಿ ಟ್ರಾಫಿಕ್ ಪೊಲೀಸರು ಸುಸ್ತಾಗಿದ್ದರಂತೆ. ಇದೀಗ ಕುಡುಕರ ಸೋಗಿನಲ್ಲಿ ತೆರಳಿ ಆರೋಪಿಯನ್ನ ಬಂಧಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಪುಟ್ಟಮಲ್ಲಯ್ಯ ಎಂಬ ಪೇದೆಯನ್ನ ಮದ್ಯವ್ಯಸನಿಯನ್ನಾಗಿ ತಂಡ ಕಳುಹಿಸಿತ್ತು. ಪೇದೆಯನ್ನ ರಿಹ್ಯಾಬಿಲಿಟೇಷನ್ ಸೆಂಟರ್​ಗೆ ಕಳುಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆತನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ