- ಮುಂಬೈ: ಮಹಾರಾಷ್ಟ್ರದ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದ ಸಮೀಪ ಹಳ್ಳವೊಂದರ ಜಲಾವೃತವಾಗಿದ್ದ ಸೇತುವೆ ದಾಟುತ್ತಿದ್ದ ಬಸ್ ವೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡದವರು ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಬಸ್ ನಲ್ಲಿದ್ದ 9ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
ಕಳೆದ ನಾಲ್ಕುದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಮಳೆಯ ರಭಸಕ್ಕೆ ಮಹಾರಾಷ್ಟ್ರದ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದ ಸಮೀಪ ಹಳ್ಳವೊಂದು ತುಂಬಿ ಹರಿಯುತ್ತಿದೆ. ತುಂಬಿ ಹರಿಯುತ್ತಿರುವ ಸೇತುವೆ ದಾಟಲು ಹೋಗಿ ಬಸ್ ನೀರಿನಲ್ಲಿ ಉರುಳಿ ಬಿದ್ದಿದ್ದು, ಬಸ್ ನಲ್ಲಿದ್ದ 9ಕ್ಕೂ ಹೆಚ್ಚು ಯುವಕರು ಬಸ್ ಒಳಗಿಂದ ಮೇಲೆ ಬರುತ್ತಿರುವ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಚಾಲಕನ ನಿರ್ಲಕ್ಷ್ಯಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬಂದಿದೆ. ಇತ್ತ ಬಸ್‌ನಲ್ಲಿ 22 ಪ್ರಯಾಣಿಕರಿದ್ದರೂ ಎನ್ನಲಾಗಿದೆ.ಈಗಾಗಲೇ 9ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಪೊಲೀಸ್‌ರು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
Shocking… Maharashtra State Transports bus driver adventurously drove Nagpur-Nanded bus with 6 passengers on flooded bridge near Umarkhed town. Bus washed away in the flood. 4 people rescued. @msrtcofficial @advanilparab @mataonline #MaharashtraRains pic.twitter.com/TQBsDIkESl
— Haaris Shaikh (@haarisRshaikh) September 28, 2021