Breaking News

ಮೀನು ಹಿಡಿಯಲು ಹೋಗಿ ಕಡಲ ಪಾಲದ ನೌಕಾನೆಲೆ ಉದ್ಯೋಗಿ

Spread the love

ಅಂಕೋಲಾ:ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಮುಳುಗಿ ನೌಕಾನೆಲೆ ಉದ್ಯೋಗಿಯೋರ್ವ ಮೃತ ಪಟ್ಟ ಘಟನೆ ಭಾನುವಾರ ಬೆಲೇಕೆರಿಯಲ್ಲಿ ನಡೆದಿದೆ.

ನೌಕಾನೆಲೆ ಉದ್ಯೋಗಿಯಾಗಿರುವ ತಾಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಪುರಂದರ ಶಿವಾನಂದ ನಾಯ್ಕ ಎಂಬಾತನೇ ಮೃತಪಟ್ಟ ವ್ಯಕ್ತಿ.

ಈತನು ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಬೆಲೇಕೆರಿ ತೀರದಲ್ಲಿ ಮೀನುಗಾರಿಕೆ ನಡೆಸಲು ಹೋಗಿದ್ದನು. ಸಮುದ್ರದಲ್ಲಿ ಆಕಸ್ಮಿಕವಾಗಿ ಬಿದ್ದು ಕೆಲ ಕಾಲ ಕಣ್ಮರೆಯಾದ ಇತನನ್ನು ಅಂಕೋಲಾ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ತಂಡ, ಸ್ಥಳೀಯರು ಹುಡುಕಾಟ ನಡೆಸಿದ ಬಳಿಕ ಮೃತ ದೇಹ ಪತ್ತೆ ಹಚ್ಚಿದ್ದಾರೆ.

 

ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆನಂದ ಗಾಂವಕರ್, ಎಎಸ್‌ಐ ರವಿಂದ್ರ ನಾಯ್ಕ. ಸಿಬ್ಬಂದಿ ರತ್ನಾಕರ ನಾಯ್ಕ ಹುಡುಕಾಟ ನಡೆಸಿದ್ದಾರೆ. ಅಂಕೋಲಾ ಪಿಎಸ್‌ಐ ಪ್ರವೀಣ ಕುಮಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ