ಬೆಳಗಾವಿ: ಸಿಎಂ ಬೆವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಹೆದರಿ ಮಹಿಳೆಯೋರ್ವರು ಆಯತಪ್ಪಿ ಸ್ಕೂಟಿಯಿಂದ ಬಿದ್ದ ಘಟನೆ ಜಿಲ್ಲೆಯ ಸಾಂವಗಾವ್ ರಸ್ತೆಯಲ್ಲಿ ನಡೆದಿದೆ.
ಸಿಎಂ ಬೊಮ್ಮಾಯಿ ಕಾರ್ಯಕ್ರಮದ ನಿಮಿತ್ತ ಸಾಂವಗಾವ್ ರಸ್ತೆಯಲ್ಲಿ ಬೆಂಗಾವಲು ವಾಹನ ಸಮೇತ ಬರುವಾಗ ದಿಢೀರ್ನೆ ಎದುರಾದ ಬೆಂಗಾವಲು ವಾಹನಗಳಿಗೆ ಹೆದರಿದ ಮಹಿಳೆಗೆ ಪೋಲಿಸರು ಪಕ್ಕಕ್ಕೆ ಹೋಗಿ ಎಂದು ಗದರಿಸಿದ್ದಾರೆ ಎನ್ನಲಾಗಿದ್ದು ಈ ವೇಳೆ ಸ್ಕೂಟಿಯನ್ನು ಪಕ್ಕಕ್ಕೆ ತಿರುಗಿಸುವಾಗ ಆಯತಪ್ಪಿ ಮಹಿಳೆ ಬಿದ್ದಿದ್ದು ಮಹಿಳೆಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.