ಶಿವಮೊಗ್ಗ: ನಾವು ರಾಜೀನಾಮೆ ನೀಡಿ ಬಿಜೆಪಿ ಬರದಿದ್ದರೆ ಸಚಿವರಾಗುತ್ತಿರಲಿಲ್ಲಎಂದು ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.
ಈಸೂರು ಹುತಾತ್ಮರ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದರಿಂದಲೇ ನಾವು ಬಿಜೆಪಿಗೆ ಬಂದಿದ್ದು. ನಂಬಿದವರಿಗೆ ಒಳ್ಳೆಯದನ್ನು ಮಾಡಲು ತಮ್ಮ ಸ್ಥಾನ ಬಿಡಲೂ ಯಡಿಯೂರಪ್ಪ ಅಂಜುವುದಿಲ್ಲ. ಯಡಿಯೂರಪ್ಪ ಅವರು ಜಾತ್ಯಾತೀತ ನಾಯಕ. ನಾವು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ 17 ಜನರಲ್ಲಿ ಇಬ್ಬರು ಮಾತ್ರ ಲಿಂಗಾಯತ ಶಾಸಕರು. ಆದರೆ, ಯಡಿಯೂರಪ್ಪ ಅವರು 17 ಜನ ಶಾಸಕರನ್ನೂ ಕೈಬಿಡಲಿಲ್ಲ ಎಂದರು.
ಇನ್ನು ಸ್ಮಾರಕ ನಿರ್ಮಾಣದಿಂದಾಗಿ ಈಸೂರು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಬಿಸಿ ಉಸಿರು ಇನ್ನೂ ಈಸೂರು ಗ್ರಾಮದಲ್ಲಿ ಉಸಿರಾಡುತ್ತಿದೆ ಎಂದರು.
Laxmi News 24×7