ಬೆಂಗಳೂರು: ರಾಜ್ಯ ಸರ್ಕಾರ ಥಿಯೇಟರ್ ಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ರಿಲೀಸ್ ಚಟುವಟಿಕೆಗಳು ಗರಿಗೆದರಿವೆ.
ಇದೀಗ ಸೂರಜ್ ಮತ್ತು ಧನ್ಯಾ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಕ್ಟೋಬರ್ 8 ರಂದು ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ಈ ಮೂಲಕ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ರಿಲೀಸ್ ಡೇಟ್ ಅನೌನ್ಸ್ ಆದ ಮೊದಲ ಸಿನಿಮಾವಾಗಿದೆ.
ಇದಕ್ಕೂ ಮೊದಲೊಮ್ಮೆ ನಿನ್ನ ಸನಿಹಕೆ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂಬ ಹಿನ್ನಲೆಯಲ್ಲಿ ರಿಲೀಸ್ ಡೇಟ್ ಮುಂದೂಡಿಕೆಯಾಗಿತ್ತು.
Laxmi News 24×7