Breaking News

ಜೇಮ್ಸ್ ದಾಖಲೆ: ಭರ್ಜರಿ ಬೆಲೆಗೆ ಸ್ಯಾಟ್‌ಲೈಟ್ ಹಕ್ಕು ಸೇಲ್

Spread the love

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಯುವರತ್ನ ಚಿತ್ರದ ನಂತರ ಅಪ್ಪು ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಬಹುದ್ಧೂರ್, ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಜೇಮ್ಸ್ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಲೇ ಇದೆ. ಕಳೆದ ಆಗಸ್ಟ್ 15 ರಂದು ಜೇಮ್ಸ್ ಹೊಸ ಪೋಸ್ಟರ್ ಬಂದಿತ್ತು. ಅದಾದ ಮೇಲೆ ಮತ್ತೆ ಯಾವ ಅಪ್‌ಡೇಟ್ ಸಹ ಹೊರಬಿದ್ದಿಲ್ಲ.

ಸೈಲೆಂಟ್ ಆಗಿ ಚಿತ್ರೀಕರಣ ಮಾಡ್ತಿರುವ ಜೇಮ್ಸ್ ಅಡ್ಡಾದಿಂದ ಈಗೊಂದು ಭರ್ಜರಿ ಸುದ್ದಿ ಬಂದಿದೆ. ಶೂಟಿಂಗ್ ಪೂರ್ಣಗೊಳಿಸಿಲ್ಲ. ವಿಡಿಯೋ ಹಾಡು ಬಂದಿಲ್ಲ. ಟ್ರೈಲರ್ ಅಥವಾ ಟೀಸರ್ ಬಿಡುಗಡೆಯಾಗಿಲ್ಲ. ಮೇಕಿಂಗ್ ಹಂತದಲ್ಲೇ ಭಾರಿ ಬೇಡಿಕೆ ಹೊಂದಿರುವ ಜೇಮ್ಸ್ ಸಿನಿಮಾ ಸ್ಯಾಟ್‌ಲೈಟ್ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡ್ತಿದೆ.

ಸದ್ಯದ ವರದಿ ಪ್ರಕಾರ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಬರೋಬ್ಬರಿ 15 ಕೋಟಿಗೆ ಸೇಲ್ ಆಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಹೇಳದೇ ಹೋದರು ಆಪ್ತ ವಲಯದಿಂದ ಈ ಸುದ್ದಿ ಸೋರಿಕೆಯಾಗಿದೆ.

ಜೇಮ್ಸ್ ಸಿನಿಮಾದಲ್ಲಿ ಬಹುದೊಡ್ಡ ತಾರಬಳಗವಿದೆ. ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿಯೂ ನಟಿಸುತ್ತಿದ್ದು, ಈ ಸಲ ನೆಗೆಟಿವ್ ಪಾತ್ರ ಆಗಿದೆ. ಈ ಹಿಂದೆ ರಾಜಕುಮಾರ ಸಿನಿಮಾದಲ್ಲಿ ಪುನೀತ್ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶರತ್ ಕುಮಾರ್ ಈಗ ಅಪ್ಪು ಎದುರು ವಿಲನ್ ಆಗಿ ಮಿಂಚಲಿದ್ದಾರೆ.

ಅದೇ ‘ರಾಜಕುಮಾರ’ ಸಿನಿಮಾದಲ್ಲಿ ನಾಯಕಿಯಾಗಿದ್ದ ಪ್ರಿಯಾ ಆನಂದ್ ಈಗ ಜೇಮ್ಸ್ ಚಿತ್ರದ ಹೀರೋಯಿನ್. ಇನ್ನುಳಿದಂತೆ ಹಾಸ್ಯನಟ ಚಿಕ್ಕಣ್ಣ, ನಟ ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ ಎಲ್ಲರೂ ಈ ಚಿತ್ರದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ ಅನು ಪ್ರಭಾಕರ್, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್ ಸಹ ನಟಿಸಿದ್ದಾರೆ.

ಜೇಮ್ಸ್ ಸಿನಿಮಾ ಔಟ್ ಅಂಡ್ ಔಟ್ ಮಾಸ್ ಚಿತ್ರವಾಗಿದ್ದು, ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ. ‘ಜೇಮ್ಸ್’ ಸಿನಿಮಾ ಮುಗಿಯುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಲೂಸಿಯಾ ಪವನ್ ಕುಮಾರ್ ನಿರ್ದೇಶಿಸಲಿರುವ ‘ದ್ವಿತ್ವ’ ಚಿತ್ರ ಆರಂಭಿಸಲಿದ್ದಾರೆ. ಈ ಪ್ರಾಜೆಕ್ಟ್‌ಗೆ ಹೊಂಬಾಳೆ ಫಿಲಂಸ್ ಬಂಡವಾಳ ಹಾಕ್ತಿದೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಮನೆ ಊಟಕ್ಕೆ ತಡೆ ನೀಡಿದ ಹೈಕೋರ್ಟ್​

Spread the loveಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್​ಗೆ ವಾರಕ್ಕೊಮ್ಮೆ ಮನೆಯಿಂದ ಊಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ