ಬೆಂಗಳೂರು : ಕೋವಿಡ್ ನಿಂದಾಗಿ ಕೆಲವೆಡೆ ಬಸ್‌ಗಳ ಸಂಚಾರ ನಿಲ್ಲಿಸಿತ್ತು. ಆದರೆ ದ್ದು, ಮಕ್ಕಳು ಶಾಲಾ-ಕಾಲೇಜಿಗೆ ತೆರಳಲು ಮೊದಲ ಆದ್ಯತೆ ನೀಡಲಾಗಿ ದ್ದು , ಈ ನಿಟ್ಟಿನಲ್ಲಿ ಬಸ್ ಸಂಚಾರ ಮತ್ತೆ ಆರಂಭಿಸಲು ನಿರ್ಧಾರಿಸಲಾಗಿದೆ ಎಂದು ಸಾರಿಗೆ ಸಚಿವ ಶ್ರೀ ರಾಮುಲು ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಕಾಂಗ್ರೆಸ್ ಸದಸ್ಯ ಬಸವನಗೌಡ ದದ್ದಲ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಶಾಲೆ- ಕಾಲೇಜು ಪ್ರಾರಂಭವಾಗಿದೆ.
ಮಕ್ಕಳ ಅನುಕೂಲಕ್ಕಾಗಿ ಕೋವಿಡ್ ವೇಳೆ ಸ್ಥಗಿತಗೊಳಿಸಿದ್ದ ಮಾರ್ಗದಲ್ಲಿ ಸಂಚಾರವನ್ನು ಮತ್ತೆ ಆರಂಭಿಸಲಾಗುವುದು. ಹೊಸ ಬಸ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ ವೇಳೆ ರಾಯಚೂರಿನ ಘಟಕ್ಕೆ ಹೊಸ ಬಸ್‌ಗಳನ್ನು ಒದಗಿಸಲಾಗುವುದು. ಹೊಸ ವಾಹನಗಳ ಖರೀದಿ ಕುರಿತು ಪರಿಸ್ತಿತಿಗೆ ಅನುಗುನವಾಗಿ ತಿರ್ಮಾನ ಕೈಗೊಳ್ಳಲಾಗುವುದು ಎಂದರು.
Laxmi News 24×7