Breaking News

ಧಾರ್ಮಿಕ ಕಟ್ಟಡ ರಕ್ಷಣೆ ವಿಧೇಯಕ ಅಂಗೀಕಾರ

Spread the love

ಸಾರ್ವಜನಿಕ ಸ್ಥಳ ಗಳಲ್ಲಿರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರವಾಗಿದೆ.”ಮೈಸೂರಿನಲ್ಲಿ 261 ಸ್ಥಳಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 161ನ್ನು ಸ್ಥಳಾಂತರಿಸಲಾಗಿದೆ” ಎಂದು ಚರ್ಚೆಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

“ಸರ್ಕಾರದ ಕಟ್ಟಡಗಳನ್ನು ಸರ್ಕಾರದ ಗಮನಕ್ಕೆ ಬಾರದೇ ಒಡೆಯಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಮಸೂದೆ ತರಲಾಗಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಆಡಳಿತದ ಸಂದರ್ಭ ಎಲ್ಲವನ್ನೂ ತೆರವುಗೊಳಿಸಿಲ್ಲ. ಹಿಂದಿನ ಸರ್ಕಾರಗಳ ಅವಧಿಯ ಸಂದರ್ಭವೂ ಈ ರೀತಿಯಾದ ಕ್ರಮ ಕೈಗೊಳ್ಳಲಾಗಿತ್ತು” ಎಂದು ತಿಳಿಸಿದ್ದಾರೆ.ವಿಧೇಯಕ ಮೂಲಕ ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಹೊಸ ನಿಯಮಾವಳಿ ರೂಪಿಸಲು ಸರ್ಕಾರ ತೀರ್ಮಾನಿಸಿದೆ. ವಿಧೇಯಕ ಅಂಗೀಕಾರಗೊಂಡ ಅಧಿಸೂಚನೆಯ ರೂಪದಲ್ಲಿ ಜಾರಿಯಾದ ಕ್ಷಣದಿಂದ ನ್ಯಾಯಾಲಯದ ತೀರ್ಪು ಹಾಗೂ ವಿಚಾರಣೆ ಹೊರತಾಗಿಯೂ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ನೀಡಬಹುದು. ಕಟ್ಟಡಗಳನ್ನು ತೆರವುಗೊಳಿಸದೇ ರಕ್ಷಣ ನೀಡುವ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಲಾಗಿದೆ.

ಮಸೂದೆಯಲ್ಲೇನಿದೆ?

ಕಾಯ್ದೆ ಜಾರಿಯಾಗುವ ಕ್ಷಣದವೆರೆಗೂ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದು. ಕಾನೂನಿನಲ್ಲಿ ಏನೇ ನಿಯಮವಿದ್ದರೂ ಈ ಕಾಯ್ದೆ ಬಂದ ಬಳಿಕ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ. ಕೋರ್ಟ್, ನ್ಯಾಯಾಧೀಕರಣ, ಪ್ರಾಧಿಕಾರ ಏನೇ ತೀರ್ಪು ನೀಡಿದ್ದರೂ ಅನ್ವಯವಿಲ್ಲ. ಹೊಸದಾಗಿ ಅನಧಿಕೃತ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವಂತಿಲ್ಲ ಎಂದು ತಿಳಿಸಲಾಗಿದೆ.


Spread the love

About Laxminews 24x7

Check Also

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಬಿಜೆಪಿ ಧರ್ಮ ಯುದ್ಧ ನಡೆಸುವುದಾಗಿ ಘೋಷಿಸಿದೆ.

Spread the love ಬೆಂಗಳೂರು: ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ “ಧರ್ಮದ ಉಳಿವಿಗಾಗಿ ಧರ್ಮ ಯುದ್ಧ” ಹೋರಾಟವನ್ನು ಮಾಡಲಿದ್ದೇವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ