Breaking News

ತುಮಕೂರಿನ ಕ್ಯಾತ್ಸಂದ್ರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

Spread the love

ತುಮಕೂರು: ಲಾಡ್ಜ್ ಒಂದರ ಸುರಂಗದಲ್ಲಿ ಅಡಗಿ ಕುಳಿತು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬೃಹತ್ ಜಾಲವೊಂದನ್ನು ತುಮಕೂರಿನ ಕ್ಯಾತ್ಸಂದ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ರಾಶಿ ರಾಶಿ ಕಾಂಡೋಮ್ ಗಳು ಬಿದ್ದಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಖಚಿತ ಮಾಹಿತಿ ಆಧಾರದ ಮೇಲೆ ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಲಾಡ್ಜ್ ನಲ್ಲೇ ಸುರಂಗ ಕೊರೆದು ದಂಧೆ ನಡೆಸುತ್ತಿರುವುದು ಬಯಲಾಗಿದೆ.

ಲಾಡ್ಜ್ ನ ರೂಮ್ ಒಂದರ ಬೃಹತ್ ಕನ್ನಡಿ ಕೆಳಭಾಗದಲ್ಲಿ ಸ್ಟ್ಯಾಂಡ್ ಮಾದರಿಯಲ್ಲಿ ಸುರಂಗ ಪತ್ತೆಯಾಗಿದೆ. ಈ ಸ್ಟ್ಯಾಂಡ್ ಬಾಗಿಲು ಒಡೆದಾಗ ಅದರಲ್ಲಿ ಇಬ್ಬರು ಯುವತಿಯರು ಹಾಗೂ ಓರ್ವ ಪುರುಷ ಅಡಗಿ ಕುಳಿತಿರುವುದು ಗೊತ್ತಾಗಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ದಾಳಿ ನಡೆಸುವ ಸುಳಿವು ಗೊತ್ತಾಗುತ್ತಿದ್ದಂತೆ ಲಾಡ್ಜ್ ನ ಸುರಂಗದಲ್ಲಿ ಯುವತಿಯರನ್ನು ಬಚ್ಚಿಡಲಾಗುತ್ತಿತ್ತು ಎನಲಾಗಿದೆ. ಈ ಭಾರಿ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದು ಕಂಡುಬಂದ್ರೆ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್

Spread the loveಬೆಳಗಾವಿ: ಡ್ರಗ್ಸ್ ಪಿಡುಗಿನ ವಿರುದ್ಧ ಸಮರ ಸಾರಿದ್ದು, ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ