ದಾಂಡೇಲಿ : ನಗರದ ಸಮೀಪದ ಆಲೂರು ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಕೇರವಾಡದ ಅಂಗನವಾಡಿ ಕೇಂದ್ರದ ಹತ್ತಿರದಲ್ಲಿರುವ ಗುಡಿಸಲು ಮನೆಯೊಂದರಲ್ಲಿ ನಾಲ್ಕು ಮಕ್ಕಳ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಕೇರವಾಡದ ಅಂಗನವಾಡಿ ಕೇಂದ್ರದ ಹತ್ತಿರದ ನಿವಾಸಿಯಾಗಿರುವ 35 ವರ್ಷ ವಯಸ್ಸಿನ ಲಲಿತಾ ಯಾನೆ ಅಶ್ವಿನಿ ಸಂಜು ಗಾವಡೆ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾಳೆ. ಈಕೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದಳೆಂದು ಹೇಳಲಾಗುತ್ತಿದೆ. ಕುಡಿದ ಅಮಲಿನಲ್ಲೆ ನೇಣಿಗೆ ಶರಣಾಗಿದ್ದಾಳೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತಳಿಗೆ ನಾಲ್ವರು ಎಳೆಯ ಪ್ರಾಯದ ಹೆಣ್ಮಕ್ಕಳಿದ್ದು, ಗಂಡ ಟ್ರಕ್ ಕ್ಲೀನರ್ ಕೆಲಸ ನಿರ್ವಹಿಸುತ್ತಿದ್ದಾನೆ.
ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Laxmi News 24×7