Breaking News

ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಟ್ರ್ಯಾಪ್ ಮಾಡಿ ರೆಡ್​​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

Spread the love

ಬೆಂಗಳೂರು: 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ಪೆಕ್ಟರ್ (Inspector) ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಠಾಣೆ ಇನ್ಸ್​ಪೆಕ್ಟರ್ ರಾಘವೇಂದ್ರ ಎಂಬುವವರು ಜಮೀನು ತಕರಾರು ಸಂಬಂಧ 10 ಲಕ್ಷ ರೂ. ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಎರಡು ಬಾರಿ ತಲಾ ನಾಲ್ಕು ಲಕ್ಷ ಪಡೆದಿದ್ದರು. ಈಗಾಗಲೇ ಒಟ್ಟು 8 ಲಕ್ಷ ರೂ. ಲಂಚವನ್ನು ಇನ್ಸ್​ಪೆಕ್ಟರ್ ರಾಘವೇಂದ್ರ ಪಡೆದಿದ್ದಾರೆ. 3ನೇ ಬಾರಿ ಕೊನೆಯ ಕಂತಾಗಿ 2 ಲಕ್ಷ ರೂ. ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಟ್ರ್ಯಾಪ್ ಮಾಡಿ ರೆಡ್​​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಐದು ಎಕರೆ ಜಮೀನು ತಕರಾರು ಸಂಬಂಧ ಇನ್ಸ್​ಪೆಕ್ಟರ್ ರಾಘವೇಂದ್ರ ಸುಮಾರು 10 ಲಕ್ಷ ರೂ. ಹಣವನ್ನು ಬೇಡಿಕೆ ಇಟ್ಟಿದ್ದರು. ಶಿವಶಂಕರ್ ಎಂಬುವವರಿಗೆ ಸೇರಿದ್ದ ಲ್ಯಾಂಡ್​ಗೆ ಸಂಬಂಧಿಸಿದ ವಿಚಾರಕ್ಕೆ ಹಣ ಬೇಡುಡಿಕೆ ಇಟ್ಟಿದ್ದರು. ಬೇಡಿಕೆ ಇಟ್ಟಿದ್ದ 10 ಲಕ್ಷ ರೂ. ಹಣದಲ್ಲಿ 8 ಲಕ್ಷ ರೂ. ಪಡೆದಿದ್ದರು. ಇನ್ನು ಎರಡು ಲಕ್ಷ ಹಣ ಬಾಕಿಯಿತ್ತು. ಎರಡು ಲಕ್ಷ ರೂ.ಹಣವನ್ನು ಪಡೆಯುವ ಹೊತ್ತಿಗೆ ಎಸಿಬಿ ಅಧಿಕಾರಿಗಳು ಇನ್ಸ್ಪೆಕ್ಟರ್ ರಾಘವೇಂದ್ರನನ್ನು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಸದ್ಯ ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಬಂಧಿಸಿದ್ದು, ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಸರಗಳ್ಳರ ಬಂಧನ
ಬಸವೇಶ್ವರನಗರ ಠಾಣಾ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಸರಗಳ್ಳರು ಅರೆಸ್ಟ್​ ಆಗಿದ್ದಾರೆ. ಕೋಲಾರದ ಮಂಜುನಾಥ(23), ಪ್ರಶಾಂತ(27) ಎಂಬುವವರು ಬಂಧನಕ್ಕೊಳಗಾದ ಸರಗಳ್ಳರು. ಆರೋಪಿಗಳು ಬೆಂಗಳೂರು ಹಾಗೂ ಕೋಲಾರದ ವಿವಿಧೆಡೆ ಸರ ಹಾಗೂ ಮನೆಗಳ್ಳತನ ಮಾಡಿದ್ದರು. ಆರೋಪಿಗಳ ಬಂಧನದಿಂದ 1 ಮನೆಗಳ್ಳತನ 4 ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಬಂಧಿತರಿಂದ 200 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ